ಅರ್ಹರಿಗೆ ಗ್ಯಾರಂಟಿ ಯೋಜನೆ ದೊರೆಯಲಿ

2 bangarpete 2
ಬಂಗಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಸಮತಿ ಉಪಾಧ್ಯಕ್ಷ ರಫೀಕ್​, ತಾಪಂ ಇಒ ರವಿಕುಮಾರ್​, ಬೆಸ್ಕಾಂ ಎಇಇ ಸುಕುಮಾರ್​ ರಾಜು, ಸಮಾಜ ಕಲ್ಯಾಣಾಧಿಕಾರಿ ಅಂಜಲಿ ಇದ್ದರು.
Published on

ಅಧಿಕಾರಿಗಳಿಗೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್​.ಎ.ಪಾರ್ಥಸಾರಥಿ ಸೂಚನೆ

ಬಂಗಾರಪೇಟೆ: ರಾಜ್ಯ ಕಾಂಗ್ರೆಸ್​ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಅಧಿಕಾರಿಗಳು ಶ್ರಮವಹಿಸಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್​.ಎ.ಪಾರ್ಥಸಾರಥಿ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬರುವಾಗ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದು ಎಷ್ಟರಮಟ್ಟಿಗೆ ಉಪಯೋಗವಾಗಿದೆ. ಇಲ್ಲವೇ ಲೋಪದೋಷಗಳು ಉಂಟಾಗಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಸಭೆ ಗಮನಕ್ಕೆ

ತರಬೇಕೆಂದು ಹೇಳಿದರು.

ಯುವ ನಿಧಿ ಯೋಜನೆ ಬಗ್ಗೆ ಎಲ್ಲ ಕಾಲೇಜುಗಳಲ್ಲಿ ಪ್ರಚಾರ ಮಾಡಿ ಯುವಕರಿಗೆ ಅರಿವು ಮೂಡಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗಸಿಗುವವರೆಗೂ ಸರ್ಕಾರ ನೀಡುವ ಸಾವಿರ ರೂ.ಗಳನ್ನು ಪಡೆಯುವಂತೆ ಪ್ರಚಾರ ಮಾಡಬೇಕಾಗಿದೆ. ಇದಕ್ಕೆ ಅಧಿಕರಾಗಳ ಸಹಕಾರ ಅವಶ್ಯವಾಗಿದೆ ಎಂದರು.

ಗೃಹಜ್ಯೋತಿ ಯೋಜನೆಯಲ್ಲಿ ಹೊಸದಾಗಿ ಮನೆ ಕಟ್ಟುವವರಿಗೆ ಹಿಂದಿನಂತೆ ಬೇಕಾಬಿಟ್ಟಿಯಾಗಿ ಮೀಟರ್​ ನೀಡದೆ ಮನೆ ನಿಮಾರ್ಣ ಮಾಡಲು ಕೆಡಿಎ ಅನುಮತಿ ಪಡೆಯುವುದು ಕಡ್ಡಾಯ ಮಾಡಿದೆ. ಅದರ ಮಾರ್ಗದರ್ಶನದಂತೆಯೇ ಮನೆ ನಿಮಾರ್ಣ ಮಾಡಿರುವವರಿಗೆ ಮಾತ್ರ ಬೆಸ್ಕಾಂನಿಂದ ಮೀಟರ್​ ನೀಡಲಾಗುವುದು. ಸಣ್ಣ ಮನೆಗಳನ್ನು ನಿಮಾರ್ಣ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸಭೆಗೆ ಬೆಸ್ಕಾಂ ಎಇಇ ಸುಕುಮಾರ್​ರಾಜು ತಿಳಿಸಿದರು.

ಶಕ್ತಿ ಯೋಜನೆ ಸಾಕಷ್ಟು ಯಶಸ್ವಿಯಾಗಿದ್ದು, ಈ ಯೋಜನೆ ಗ್ರಾಮೀಣ ಭಾಗದ ಹಾಗೂ ಬಡ ಮಧ್ಯಮ ವರ್ಗದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನೂ ಕೆಲವು ಕಡೆ ಕೆಂಪು ಬಸ್​ ಸಂಚರಿಸದೆ ಇರುವುದರಿಂದ ಆ ಕಡೆ ಬಸ್​ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂಬ ಒತ್ತಡಗಳು ಬರುತ್ತಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಯಾವ ಮಾರ್ಗದಲ್ಲಿ ಸಾರಿಗೆ ಬಸ್​ ಕೊರತೆ ಇದೆಯೋ ಆ ಕಡೆ ಬಸ್​ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದರು. ಗೃಹಲಕ್ಷಿ$್ಮ ಯೋಜನೆ ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. 78 ಮಹಿಳೆಯರಿಗೆ ಮಾತ್ರ ಇದುವರೆಗೂ ಹಣ ಬಂದಿಲ್ಲ. ಆಧಾರ್​ ಲಿಂಕ್​ ಆಗದ ಕಾರಣ ಹಣ ಸಂದಾಯ ಸ್ಥಗಿತವಾಗಿದೆ. ಸರಿಪಡಿಸಲು ಸಿಡಿಪಿಒ ಅವರಿಗೆ ತಿಳಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net