ಅರ್ಹ ಫಲಾನುಭವಿಗಳಿಗೆ ಲಾಭ ಸಿಗಲಿ

h27-jyoti bjp
Published on

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಮಹಿಳಾಪರ ಯೋಜನೆ ಜಾರಿಗೆ ತಂದಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಎಂದು ಜ್ಯೋತಿ ಜೋಶಿ ಹೇಳಿದರು.
ಇಲ್ಲಿನ ವಾಡ್ ರ್ ನಂ. 47ರಲ್ಲಿ ಶನಿವಾರ ಏರ್ಪಡಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಸಂಬಂಧಿಸಿದ ವಿಷಯ ಬಂದಾಗ ನಮ್ಮ ಸರ್ಕಾರವು ರಾಜಕೀಯ ಮಾಡುವುದನ್ನು ಬಿಟ್ಟುಬಿಡುತ್ತದೆ. ಇದು ಪ್ರಧಾನ ಮಂತ್ರಿಯವರಿಗೆ ಅಚಲವಾದ ಬದ್ಧತೆಯ ವಿಷಯವಾಗಿದೆ ಎಂದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಕಮಲಾ ಜೋಶಿ, ಲಕ್ಷ್ಮೀ ಉಪ್ಪಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net