ನೆಲದ ಸಂಸ್ಕೃತಿ, ಪರಂಪರೆ ಉಳಿಯಲಿ

2
ಮುಳಬಾಗಿಲಿನ ಮುತ್ಯಾಲಪೇಟೆಯ ಶುಭ ಶಿವಕೇಶವ ನಗರದ ಶ್ರೀ ಉದ್ಭವ ಶಿವಲಿಂಗೇಶ್ವರನಿಗೆ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ರಾಸುಗಳ ಮೆರವಣಿಗೆಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​, ಸಂಕ್ರಾಂತಿ ಆಚರಣೆ ಸಮಿತಿ ಅಧ್ಯಕ್ಷ ಕೆ.ಶಂಕರ್​ ಕೇಸರಿ ಚಾಲನೆ ನೀಡಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯ ಅಮಾನುಲ್ಲ, ನಗರಸಭೆ ಸದಸ್ಯರಾದ ಎಂ.ಪ್ರಸಾದ್​, ನಿರೂಪಮ, ಗರಡಿ ಆರ್​.ಶಂಕರಪ್ಪ, ಜಬಿವುಲ್ಲಾ, ಅಕ್ಮಲ್​ ಬೇಗ್​, ಜಿ.ಠಾಕೂರ್​ಸಿಂಗ್​, ಎಂ.ಮಂಜುನಾಥ್​ ಇದ್ದರು.
Published on

ಶಾಸಕ ಸಮೃದ್ಧಿ ಮಂಜುನಾಥ್​ ಹೇಳಿಕೆ - ರಾಸುಗಳ ಮೆರವಣಿಗೆಗೆ ಚಾಲನೆ

ಮುಳಬಾಗಿಲು: ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ರಾಸುಗಳ ಮೆರವಣಿಗೆ ಅಲಂಕಾರ ಈ ನೆಲದ ಸಂಸತಿ, ಪರಂಪರೆ ವೈಭವವಾಗಿಯೇ ಉಳಿಯಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.

ಮಕರ ಸಂಕ್ರಾಂತಿ ಪ್ರಯುಕ್ತ ನಗರದ ಮುತ್ಯಾಲಪೇಟೆಯ ಶ್ರೀಉದ್ಭವ ಶಿವಲಿಂಗೇಶ್ವರ ದೇವಾಲಯದಲ್ಲಿ ಜಾನುವಾರುಗಳ ಮೆರವಣಿಗೆಗೆ ಮಂಗಳವಾರ ಚಾಲನೆ ನೀಡಿ, ಭಜನೆ ಮಂದಿರದ ಬಳಿಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದಿಂದ ಸಂಕ್ರಾಂತಿ ರಾಸುಗಳ ಮೆರವಣಿಗೆಯನ್ನು "ಮುಳಬಾಗಿಲು ಹಬ್ಬವಾಗಿ ವೈಭವ ಕಾಣುವಂತೆ ಆಚರಿಸಲು ಕ್ರಮವಹಿಸಲಾಗುವುದು ಎಂದರಲ್ಲದೇ ಭಜನೆ ಮಂದಿರ ಅಭಿವೃದ್ಧಿಗೆ ಶಾಸಕರ ನಿಧಿಯಲ್ಲಿ ಅನುದಾನ ನೀಡಿ, 6 ತಿಂಗಳಲ್ಲೆ ಭವ್ಯ ಕಟ್ಟಡ ಲೋಕಾರ್ಪಣೆ ಗೊಳಿಸುವುದಾಗಿ ಭರವಸೆ ನೀಡಿದರು.

ಮಧ್ಯಾಹ್ನ 1.20ಕ್ಕೆ ಶ್ರೀ ಉದ್ಭವ ಶಿವಲಿಂಗೇಶ್ವರ ದೇವಾಲಯದ ಮುಂಭಾಗದಿಂದ ರಾಸುಗಳ ಮೆರವಣಿಗೆ ಆರಂಭಗೊಂಡು ಶ್ರೀಗಂಗಮ್ಮ ದೇವಾಲಯ, ಭಜನೆ ಮಂದಿರ, ಕಾವೇರಿ ನಾರಾಯಣಪ್ಪ ಮನೆ ಸಮೀಪ ವಿಶೇಷ ಪೂಜೆ, ಅಂಬೇಡ್ಕರ್​ ನಗರ ಗಂಗಮ್ಮ ದೇವಾಲಯ, ತಾತಿಪಾಳ್ಯ ಗಂಗಮ್ಮ ದೇವಾಲಯ, ಬಜಾರು ರಸ್ತೆಯ ಮಾರ್ಗವಾಗಿ ಗುಣಿಗಂಟಿಪಾಳ್ಯ ಭಜನೆ ಮಂದಿರ, ಗಂಗಮ್ಮ ದೇವಾಲಯ, ನೇತಾಜಿನಗರದ ಶ್ರೀರೇಣುಕಾ ಯಲ್ಲಮ್ಮ, ಗಂಗಮ್ಮ ದೇವಾಲಯ ಸೇರಿ ನಗರದ ವಿವಿಧ ದೇವಾಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸಂಜೆ ವಿಶೇಷ ಗೋಪೂಜೆ ಬಳಿಕ ನೇತಾಜಿ ಕ್ರೀಡಾಂಗಣದಲ್ಲಿ ಅಲಂಕೃತ ಗೋವುಗಳಿಗೆ ಪ್ರಥಮ, ದ್ವೀತಿಯ ಹಾಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಅಂಬೇಡ್ಕರ್​ ನಗರದಲ್ಲಿ ಜಾನುವಾರುಗಳ ಮೆರವಣಿಗೆ ಸಾಗಿದಾಗ ಒಂದೇ ಸಮುದಾಯ ಜೈ ಭೀಮ್​ ಬಾಯ್ಸ್​ ಮತ್ತು ಮೋದಿ ಬಾಯ್ಸ್​ ನಡುವೆ ಜಯೂಷಗಳಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಸಿಗೊಳಿಸಿದರು. ಶಾಸಕ ಸಮೃದ್ಧಿ ವಿ.ಮಂಜುನಾಥ್​, ತಹಸೀಲ್ದಾರ್​ ವಿ.ಗೀತಾ, ಸಂಕ್ರಾಂತಿ ಹಬ್ಬ ಆಚರಣೆ ಸಮಿತಿ ಅಧ್ಯ ಕೆ.ಶಂಕರ್​ ಕೇಸರಿ, ಸಿ.ವಿ.ಗೋಪಾಲ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಅಮಾನುಲ್ಲ, ನಗರಸಭೆ ಸದಸ್ಯರಾದ ಎಂ.ಪ್ರಸಾದ್​, ನಿರೂಪಮ, ಗರಡಿ ಆರ್​.ಶಂಕರಪ್ಪ, ಜಬಿವುಲ್ಲಾ, ಅಕ್ಮಲ್​ ಬೇಗ್​, ಮಾಜಿ ಸದಸ್ಯರಾದ ಜಿ.ಠಾಕೂರ್​ಸಿಂಗ್​, ಎಂ.ಮಂಜುನಾಥ್​, ಎನ್​.ಸತೀಶ್​ ಕುಮಾರ್​, ಎಂ. ಎಸ್​.ನಾರಾಯಣಸ್ವಾಮಿ, ಕಾವೇರಿ ನಾರಾಯಣಪ್ಪ ಹಾಗೂ ಇತರರು ಇದ್ದರು.

ಪೊಲೀಸ್​ ಬಂದೋಬಸ್​

ನಾಲ್ಕು ದಶಕಗಳ ಹಿಂದೆ ಸಂಕ್ರಾಂತಿ ಆಚರಣೆ ವೇಳೆ ಉಂಟಾಗಿದ್ದ ಗಲಭೆ ಹಿನ್ನೆಲೆಯಲ್ಲಿ ಎಸ್​ಪಿ ಬಿ.ನಿಖಿಲ್​, ಪೊಬೆಷನರಿ ಎಸ್ಪಿ ಎಸ್​.ಶರ್ಮ, ಹೆಚ್ಚುವರಿ ರಣಾಧಿಕಾರಿ ರವಿಶಂಕರ್​, ಜಗದೀಶ್​, ಡಿವೈಎಸ್​ಪಿ ಡಿ.ಸಿ.ನಂದಕುಮಾರ್​, ನಗರ ಠಾಣೆ ಪಿಐ.ಎನ್​.ರಾಜಣ್ಣ, ಗ್ರಾಮಾಂತರ ಸಿಪಿಐ ಕೆ.ಜಿ. ಸತೀಶ್​, ಪಿಎಸ್​ಐಗಳಾದ ಅಣ್ಣಯ್ಯ, ವಿಠಲ್​ ವೈ.ತಳವಾರ್​, ಎಲ್​.ಮಮತಾ, ಅರ್ಜುನ್​ಗೌಡ ಸೇರಿ ಜಿಲ್ಲೆಯ, ಹೊರ ಜಿಲ್ಲೆಗಳ ಪೊಲೀಸ್​ ಅಧಿಕಾರಿಗಳು ಸೇರಿ ಇಲಾಖೆಯ ಸಾವಿರಾರು ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್​ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net