

ರಾಯಚೂರು ಸಿಂಧನೂರಿನ ಆರ್.ಹೆಚ್. ಕಾಲೋನಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಕ್ರಮ ನಡೆದಿರುವ ಕುರಿತು ಸಂಘಗಳ ಉಪ ನಿಂಬಂದಕರಿಗೆ ದೂರು ನೀಡಿದ್ದರು, ತನಿಖೆ ನಡೆಸಿ ವರದಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಂಘದ ಸದಸ್ಯ ಆರೋಗ್ಯಸ್ವಾಮಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಆರ್‌ಎಚ್ ನಂ.2 ಬ್ಯಾಂಕ್ ನಿರ್ದೇಶಕರಿದ್ದು, ಬ್ಯಾಂಕ್‌ನಲ್ಲಿ ಸಾಲದ ಮೇಲೆ 1570 ಕೆಜಿ ಯ ಭತ್ತ ತುಂಬಿದ ಚೀಲಗಳನ್ನು ಅಡಮಾನ ಇಟ್ಟಿದ್ದು, ಇದೀಗ ಈ ಚೀಲಗಳು ಗೋದಾಮಿನಿಂದ ಕಾಣೆಯಾಗಿವೆ ಎಂದು ಆರೋಪಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಪೋಸ್ ರಾಯ್ ಅವರು ಅಕ್ರಮ ನಡೆಸಿದ್ದು, ಈ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ, ನಿರ್ದೇಶಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಾಲಕ್ಕಾಗಿ ಅಡಮಾನ ಇಟ್ಟಿದ್ದ ಚೀಲಗಳು ಎಲ್ಲಿಗೆ ಹೋಗಿವೆ, ಎಂಬುದರ ಕುರಿತಾಗಿ ಸಹಕಾರ ಸಂಘದಗಳ ಉಪ ನಿಬಂಧಕರಿಗೆ ದೂರು ನೀಡಿದ್ದು, ಆದರೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ವರದಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಆದರಿಂದ ಈ ಕೂಡಲೇ ಸೂಕ್ತ ತನಿಖೆ ನಡೆಸಿ ಅಧಿಕಾರಿ ವಿರುದ್ಧ ಮತ್ತು ಸಹಕಾರ ಸಂಘದಲ್ಲಿ ನಡೆದ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾಣಿಕ್ ಸರ್ಕಾರ, ಆನಂದೋಬಾರ್, ಸುನಿಲ್ ವಿಸ್ವಾಸ್, ದೀಪಕ್ ಮಂಡಲ್ ಇದ್ದರು.