ಯುವಜನರಲ್ಲಿ ರಾಷ್ಟ್ರಭಕ್ತಿಯ ಪರಿಕಲ್ಪನೆ ಮೂಡಲಿ

18sgr2
ಸಾಗರದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಎಚ್.ಕೆ.ನಾಗಪ್ಪ, ಮಧುರಾ ಶಿವಾನಂದ್, ಗಣಪತಿ ಮಂಡಗಳಲೆ, ಉಮೇಶ್ ಇತರರಿದ್ದರು.
Published on

ಸಾಗರ: ರಾಷ್ಟ್ರಭಕ್ತಿಯ ಪರಿಕಲ್ಪನೆ ಯುವಜನರಲ್ಲಿ ಮೂಡಬೇಕು. ಪ್ರತಿಯೊಬ್ಬರೂ ಮಣ್ಣಿನ ಬಗ್ಗೆ ಕಾಳಜಿ ಹೊಂದಿರಬೇಕು ಎಂದು ನಗರಸಭೆಯ ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಸ್ವಾತಂತ್ರೃದ ಅಮೃತ ಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಆಯೋಜಿಸಿರುವ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಮತ ವಾಟಿಕವನ ನಾಮಲಕ ಅನಾವರಣಗೊಳಿಸಿ ಹಾಗೂ ನಿವೃತ್ತ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿ, ಸಾಗರ ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ದೇಸಿ ತಳಿಯ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಗರಸಭೆ ಆವರಣದಲ್ಲಿ 20ಕ್ಕೂ ಹೆಚ್ಚು ಸಂಪಿಗೆ ಮತ್ತು ನೆಲ್ಲಿಕಾಯಿ ಸಸಿ ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದೆ. ಪಂಚ ಪ್ರತಿಜ್ಞೆಗಳ ನಾಮಲಕ ಅನಾವರಣಗೊಳಿಸುವ ಮೂಲಕ ನಮ್ಮ ದೇಶದ ಸಮೃದ್ಧತೆಯನ್ನು ಕಾಯ್ದುಕೊಳ್ಳುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಜಿ.ಎಸ್.ವೆಂಕಟೇಶ್, ಮಣ್ಣಿನ ಕಣ ಕಣದ ರಕ್ಷಣೆ ನಮ್ಮ ಹೊಣೆ ಎನ್ನುವ ಸಂಕಲ್ಪದೊಂದಿಗೆ ನಾವು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಹೆಚ್ಚಿನ ಸೌಲಭ್ಯ ಸರ್ಕಾರ ನೀಡುತ್ತಿದೆ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವುದೇ ಒಂದು ಹೆಮ್ಮೆ ಎಂದರು.
ನಿವೃತ್ತ ಯೋಧರಾದ ಬಿ.ಟಿ.ಸೋಮನ್, ರಾಜೇಶ್, ಎನ್.ಬಿ.ನಾಯಕ್, ಸುಧೀಂದ್ರ ಭಟ್, ಈಶ್ವರಪ್ಪ, ಹುತಾತ್ಮ ಯೋಧನ ತಂದೆ ದಾಮೋದರ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಸದಸ್ಯರಾದ ಮಧುರಾ ಶಿವಾನಂದ್, ಗಣಪತಿ ಮಂಡಗಳಲೆ, ಉಮೇಶ್, ಪರಿಸರ ಅಭಿಯಂತ ಮದನ್, ಹಬೀಬ್, ವೆಂಕಟೇಶ್, ವಿ.ಟಿ.ಸ್ವಾಮಿ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net