

ಮೂಡಲಗಿ: ಪಟ್ಟಣದಲ್ಲಿ ಮೂಡಲಗಿ ತಾಲೂಕು ಉಪ್ಪಾರ ಸಂಘ ಹಾಗೂ ಉಪ್ಪಾರ ಸಮುದಾಯದಿಂದ ಭಗೀರಥ ಭಾರತ ಜನ ಕಲ್ಯಾಣ ರಥ ಯಾತ್ರೆಗೆ ಶುಕ್ರವಾರ ಭವ್ಯ ಸ್ವಾಗತ ಕೋರಲಾಯಿತು. ಪಟ್ಟಣಕ್ಕೆ ಆಗಮಿಸಿದ ಮಹರ್ಷಿ ಭಗೀರಥ ಪ್ರತಿಮೆಯ ರಥಕ್ಕೆ ಗುಡ್ಲಮಡ್ಡಿ ಈರಣ್ಣ ದೇವಸ್ಥಾನ ಹತ್ತಿರ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಕಲ್ಮೇಶ್ವರ ವೃತ್ತ, ಕರೆಮ್ಮ ದೇವಿ ಸರ್ಕಲ್, ಬಸವೇಶ್ವ ಸರ್ಕಲ್, ಸಂಗಪ್ಪಣ್ಣ ಸರ್ಕಲ್ ಮೂಲಕ ರಥಯಾತ್ರೆ ಸಾಗಿ ಕಲ್ಮೇಶ್ವರ ವೃತ್ತಕ್ಕೆ ಯಾತ್ರೆ ಆಗಮಿಸಿತು.
ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, 2024ರ ಫೆ.29ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮುದಾಯದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಸಮುದಾಯದ ಹಿರಿಯ ಮುಖಂಡ ಭೀಮಪ್ಪ ಹಂದಿಗುಂದ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಣ್ಣ ಹಂದಿಗುಂದ, ನಗರ ಘಟಕ ಅಧ್ಯಕ್ಷ ಶಿವಬಸು ಹಂದಿಗುಂದ, ಮುಖಂಡರಾದ ಶಿವಬಸು ಕಂಕಣವಾಡಿ, ಈಶ್ವರ ಕಂಕಣವಾಡಿ, ಸಿದ್ದಪ್ಪ ಹಮ್ಮನವರ, ಭರಮಣ್ಣ ಉಪ್ಪಾರ, ರಾಜು ಕಸ್ತೂರಿ, ಪರಸಪ್ಪ ಉಪ್ಪಾರ, ಲಕ್ಷ್ಮಣ ಅಡಿಹುಡಿ, ಸುಭಾಸ ಗೋಡ್ಯಾಗೋಳ, ಪರಸಪ್ಪ ತಿಗಡಿ, ಬಸವರಾಜ ಹುಚ್ಚಣ್ಣವರ, ರಮೇಶ ಉಪ್ಪಾರ, ಸುಭಾಸ ಪೂಜೇರಿ, ಶಿವಪ್ಪ ಅಟಮಟ್ಟಿ, ಮಹಾದೇವ ಮಲಗೌಡರ, ರಘುವೀರ ಕಪ್ಪಲಗುದ್ದಿ, ಹನುಮಂತ ಕಂಕಣವಾಡಿ, ಹಾಲಪ್ಪ ಅಂತರಗಟ್ಟಿ, ಆನಂದ ಮೇಳವಂಕಿ, ಅಜ್ಜಪ್ಪ ಕಂಕಣವಾಡಿ ಇತರರಿದ್ದರು.