ಸಿಎಂ ಸುತ್ತೋಲೆ ಬಿಡುಗಡೆ ಮಾಡಲಿ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬೇರೆ ಬೇರೆ ವಸತಿ ಯೋಜನೆಯಡಿ ಮುಸ್ಲಿಮ್​ಗೆ ಶೇ. 15ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ 2019ರಲ್ಲಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಹಾಗೇನಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸುತ್ತೋಲೆ ಇದ್ದಲ್ಲಿ ಶೀಘ್ರ ಬಿಡುಗಡೆ ಮಾಡಲಿ. ಸಿಎಂ ಅವರಿಗೆ ಇದು ನನ್ನ ನೇರ ಸವಾಲು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ಕಲ್ಪಿಸಿರುವುದಕ್ಕೆ ವಿರೋಧ ವ್ಯಕ್ತವಾದಾಗ ಸಿಎಂ ಅವರು ಕೇಂದ್ರ ಸರ್ಕಾರದ 2019ರ ಸುತ್ತೋಲೆ ಪ್ರಕಾರ ಮಾಡಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ. ಟ್ವಿಟ್ ಜತೆ ಕೇಂದ್ರ ಸರ್ಕಾರ ಸುತ್ತೋಲೆಯನ್ನು ಅಟ್ಯಾಚ್ ಮಾಡಿಲ್ಲ ಎಂದರು.

ಕಾಂಗ್ರೆಸ್ ಪಕ್ಷದ ನೀತಿಯೇ ಮುಸ್ಲಿಂ ತುಷ್ಟೀಕರಣವಾಗಿದೆ. ದೇಶದ ಸಂಪನ್ಮೂಲದ ಮೇಲೆ ಮುಸ್ಲಿಮ್​ಗೆ ಹಕ್ಕು ಇದೆ ಎಂದು ಸ್ವತಃ ಪ್ರಧಾನಿಯಾಗಿದ್ದಾಗ ಮನಮೋಹನ ಸಿಂಗ್ ಹೇಳಿದ್ದರು. ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ಓಬವ್ವ ಆತ್ಮರಕ್ಷಣ ತರಬೇತಿ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಇದೀಗ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ಕಲ್ಪಿಸಿದೆ. ಹೀಗೆ ಎಲ್ಲವನ್ನು ವೋಟ್ ಬ್ಯಾಂಕ್​ಗಾಗಿ ಮಾಡಿರುವ ಕಾಂಗ್ರೆಸ್ ಸರ್ಕಾರ, ಕೇಂದ್ರದ ಮೇಲೆ ಸುಮ್ಮನೆ ಬೊಟ್ಟು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net