

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್ ದಾಖಲಾಗದೆ ಇದ್ದಂತಹ ಸಂದರ್ಭದಲ್ಲಿ ಮನೆಯ ಬಳಿ ಜನಜಂಗುಳಿ ಇತ್ತು. ಆದರೆ, ಇಂದು ಅವರ ಮನೆಯ ಮುಂದೆ ಜನರೇ ಇರಲಿಲ್ಲ. ಹಾಗೆಯೇ ದೇವರಾಜ ಅರಸು ಅವರು ಅಧಿಕಾರ ಕಳೆದುಕೊಂಡ ನಂತರ ಒಬ್ಬರೂ ಅವರ ಬಳಿ ಸುಳಿಯಲಿಲ್ಲ ಎನ್ನುವುದನ್ನು ನಾವೆಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ ಶಾಶ್ವತ ಅಲ್ಲ ಎಂದು ಪ್ರತಾಪಸಿಂಹ ಪರೋಕ್ಷವಾಗಿ ಟೀಕಿಸಿದರು.
ನನಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಈ ಬಾರಿ ವಿವಿಧ ಕಾರಣಗಳಿಂದ ಟಿಕೆಟ್ ಕೈ ತಪ್ಪಿತ್ತು. ಸೂರ್ಯನಿಗೆ ಗ್ರಹಣ ಬಡಿಯುತ್ತೆ. ಇನ್ನು ನಾನು ಯಾವ ಲೆಕ್ಕ. ಹಾಗಾಗಿ, ಇಂದಿಗೂ ನಾನು ಜನರ ಪ್ರೀತಿ-ವಿಶ್ವಾಸವನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.