

ಕೂಡಲಸಂಗಮ: ಮಕ್ಕಳಲ್ಲಿರುವ ಪ್ರತಿಭೆಯನ್ನು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಹೊರತರುವ ಕಾರ್ಯವನ್ನು ನಿರಂತರ ಮಾಡಬೇಕೆಂದು ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಚಾರ್ಯ ಸುರೇಶ ರಾಠೋಡ ಹೇಳಿದರು.
ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶನಿವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಜ್ಞಾನಿಗಳು ಇಲ್ಲಿಯವರೆಗೂ ಕಂಡು ಹಿಡಿದಿರುವುದು ವಿಜ್ಞಾನದ ಪ್ರಗತಿಯಿಂದ. ಮನುಷ್ಯನ ಬದುಕಿಗೆ ವಿಜ್ಞಾನ ಕ್ಷೇತ್ರ ಅಪಾರ ಕೊಡುಗೆ ನೀಡಿದೆ ಎಂದರು.
ಇದ್ದಲಗಿ ಶರಣಬವೇಶ್ವರ ಪ್ರೌಢಶಾಲೆ ಶಿಕ್ಷಕ ಪ್ರಶಾಂತ ಪಟ್ಟದಕಲ್ಲ ಮಾತನಾಡಿ, ಆಧುನಿಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರಿಸುವ ಕಾರ್ಯ ಶಿಕ್ಷಕರ ಮೇಲಿದೆ ಎಂದರು.
ಉಪನ್ಯಾಸಕರಾದ ವಿಶ್ವನಾಥ, ಶಿವಲೀಲಾ ಚೌಧರಿ, ಮಹೇಶ ಹಳ್ಳೂರ ಇತರರಿದ್ದರು. ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.