ಜಾಗೃತ ಭಾರತ ನಿರ್ಮಾಣಕ್ಕೆ ಮಕ್ಕಳು ಮುಂದಾಗಲಿ

25 vpt 1.1
ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಪಾರಿತೋಷಕವನ್ನು ನೀಡಲಾಯಿತು. ಲವೀನ್ ಚಂಗಪ್ಪ , ಸಾದಿಕ್ ಹಂಸ , ಪ್ರಣವ್ ಚಿತ್ರಭಾನು, ಸುದರ್ಶನ್, ಆದಿತ್ಯ ಇದ್ದರು.
Published on

ವಿರಾಜಪೇಟೆ: ಸ್ವಾತಂತ್ರೃ ಹೋರಾಟ ಒಂದು ದಿನಕ್ಕೆ ಸೀಮಿತವಾಗದೆ ಹಲವು ವರ್ಷಗಳ ಸುದೀರ್ಘ ಹೋರಾಟ, ತ್ಯಾಗ, ಬಲಿದಾನದ ಮೂಲಕ ಭಾರತೀಯರು ಸ್ವಾತಂತ್ರೃ ಪಡೆದಿದ್ದಾರೆ ಎಂದು ರೋಟರಿ ಸಂಸ್ಥೆ ವಲಯ ಅಧಿಕಾರಿ ಡಾ. ಲವೀನ್ ಚೆಂಗಪ್ಪ ಹೇಳಿದರು.


ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ವಿರಾಜಪೇಟೆ ರೋಟರಿ ಕ್ಲಬ್, ಸಾದಿಕ್ ಆರ್ಟ್ ಲಿಂಕ್ಸ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿದ್ಯಾರ್ಥಿ ಕಲಾ ಉತ್ಸವ-2024 ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ದಿನ ದೇಶ ಭಕ್ತಿ ಬಿಂಬಿಸುವ ಚಿತ್ರ ಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ, ಕರಾಳ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ದೇಶಭಕ್ತಿ ಮೈಗೂಡಿಸಿಕೊಂಡು. ಜಾಗೃತ ಭಾರತ ನಿರ್ಮಾಣಕ್ಕೆ ಮಕ್ಕಳು ಮುಂದಾಗಬೇಕು. ಸದೃಢ ಭಾರತದ ಕನಸು ನನಸಾಗಬೇಕು ಎಂದು ತಿಳಿಸಿದರು.


ರೋಟರಿ ಸಂಸ್ಥೆ ವಿರಾಜಪೇಟೆ ಅಧ್ಯಕ್ಷ ಪ್ರಣವ್ ಚಿತ್ರಭಾನು ಮಾತನಾಡಿ, ನಾಡು ನನ್ನದು, ದೇಶ ನನ್ನದು ಭಾವರ್ಥ ನಮ್ಮ ಧ್ಯೇಯ ವಾಕ್ಯವಾಗಬೇಕು. ದೇಶಭಕ್ತಿ ಪರಿಕಲ್ಪನೆ ಎಲ್ಲ ವಿದ್ಯಾರ್ಥಿಗಳಲ್ಲಿ ಜಾಗೃತವಾಗಲಿ ಎಂದು ಹೇಳಿದರು.


ಚಿತ್ರಕಲಾ ಸ್ಪರ್ಧೆಯಲ್ಲಿ ನಾಪೋಕ್ಲು, ಮೂರ್ನಾಡು, ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಗೋಣಿಕೊಪ್ಪ ಮತ್ತು ವಿರಾಜಪೇಟೆ ನಗರದ ವಿವಿಧ ಶಾಲೆಗಳ 95 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.


ರೋಟರಿ ಸಂಸ್ಥೆ ವಿರಾಜಪೇಟೆ ಹಿರಿಯ ಸದಸ್ಯ ಸುದರ್ಶನ್ ರೈ, ಉಪಾಧ್ಯಕ್ಷ ಕೆ.ಎಚ್.ಆದಿತ್ಯ, ಕಾರ್ಯಕ್ರಮ ಆಯೋಜಕ ಸಾದಿಕ್ ಹಂಸ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net