ವೃದ್ಧಾಪ್ಯದಲ್ಲಿ ಪಾಲಕರಿಗೆ ಮಕ್ಕಳು ಆಸರೆಯಾಗಲಿ

17spt2
ಸೋಮವಾರಪೇಟೆಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಕೀಲ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿದರು. ದಾಮೋಧರ್, ಮಲ್ಲಪ್ಪ, ಶ್ರೀ ಕಂಠ, ಚಂಗಪ್ಪ, ಪುರಂದರ ಇದ್ದರು.
Published on

ಸೋಮವಾರಪೇಟೆ: ಮಕ್ಕಳನ್ನು ಪಾಲಕರು ನೋಡಿಕೊಳ್ಳುವುದು ಎಷ್ಟು ಮುಖ್ಯವೋ ವೃದ್ಧಾಪ್ಯದಲ್ಲಿ ಪಾಲಕರನ್ನು ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಹಿರಿಯ ವಕೀಲ ಎಂ.ಬಿ.ಅಭಿಮನ್ಯು ಕುಮಾರ್ ಹೇಳಿದರು.

ಇಲ್ಲಿನ ಮಹಿಳಾ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಸೇವಾ ಟ್ರಸ್ಟ್‌ನ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ವೃದ್ಧಾಪ್ಯದಲ್ಲಿ ಪಾಲಕರನ್ನು ನೋಡಿಕೊಳ್ಳದಿದ್ದರೆ ಕಾನೂನಿನ ಪ್ರಕಾರ ಅಪರಾಧ ಎಂದರು.

ಅರವತ್ತು ವರ್ಷ ತುಂಬಿದ ಹಿರಿಯ ನಾಗರಿಕರು ಟ್ರಸ್ಟ್‌ನ ಸದಸ್ಯರಾಗಬೇಕು. ಆ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಟ್ರಸ್ಟ್ ಅಧ್ಯಕ್ಷ ಎಂ.ಟಿ.ದಾಮೋದರ್ ಹೇಳಿದರು.

ಇದೇ ಸಂದರ್ಭ 2024ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಸಿ.ಕೆ.ಮಲ್ಲಪ್ಪ, ಉಪಾಧ್ಯಕ್ಷ ಶ್ರೀಕಂಠ, ಸಹ ಕಾರ್ಯದರ್ಶಿ ಎಚ್.ಸಿ.ಚಂಗಪ್ಪ, ಖಜಾಂಚಿ ಡಿ.ಟಿ.ಪುರಂದರ್, ನಿರ್ದೇಶಕರಾದ ಎಸ್.ಎಂ.ಮನುಬಾಯಿ, ಎಚ್.ಎಸ್.ವರಲಕ್ಷ್ಮೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net