

ಕೊಳ್ಳೇಗಾಲ: ಪಟ್ಟಣ ಹೊರವಲಯದ ಹುದಾ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಕ್ಕಳಿಗೆ ಗುಲಾಬಿ ಹೂ ನೀಡುವ ಮೂಲಕ ಬರಮಾಡಿಕೊಂಡರು.
ಶಿಕ್ಷಕರು ಹೇಳುವ ಪಾಠವನ್ನು ಶ್ರದ್ಧೆಯಿಂದ ಕಲಿತು ವಿದ್ಯಾವಂತರಾಗಬೇಕು. ತಂದೆ-ತಾಯಿ ಮಾರ್ಗ ದರ್ಶನದಂತೆ ನಡೆದು ಓದಿದ ಶಾಲೆಗೆ ಹಾಗೂ ಗುರುಗಳಿಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ನಾಶೀರ್ ಷರೀಫ್, ಟಿಪ್ಪು ಕಮಿಟಿ ಅಧ್ಯಕ್ಷ ಆರೀಫ್ ಪಾಷ, ಯುವ ಮುಖಂಡ ರಿಜ್ವಾನ್ ಪಾಷ, ಹುದಾ ಶಾಲೆ ಅಧ್ಯಕ್ಷ ಡಾ.ನೂರುದ್ಧೀನ್, ಕಾರ್ಯದರ್ಶಿ ಎಂ.ಹುಮ್ಮಯುನ್, ಎಸ್.ಎಂ.ಸ್ಟೀಲ್ ಮಾಲೀಕ ಮಹಮ್ಮದ್ ಅಜ್ಮಲ್ ಇತರರು ಇದ್ದರು.