

ಅಳಗವಾಡಿ: ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವಲ್ಲಿ ವಿಲರಾಗಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ಜಕನೂರಿನ ಮಾದಣ್ಣ ಮದಗೊಂಡೇಶ್ವರ ಸಿದ್ಧಾಶ್ರಾಮದ ಡಾ. ಮಾಧುಲಿಂಗ ಶ್ರೀಗಳು ವಿಷಾದಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಬಿಸಿಯೂಟದ ಸಹಾಯಕ ನಿರ್ದೇಶಕ ಸುಭಾಷ ವಲ್ಯಾಪೂರೆ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಶಿರಗೂರೆ, ಗ್ರಾಪಂ ಅಧ್ಯಕ್ಷ ಕುಮಾರ ಬನಶಂಕರಿ, ಜಿಪಂ ಮಾಜಿ ಸದಸ್ಯ ಮಹಾದೇವ ಶಿರಗೂರೆ, ತಾಪಂ ಮಾಜಿ ಸದಸ್ಯ ಶಾಮರಾವ ಬನಶಂಕರಿ, ರೇವಣ್ಣ ಸರವ, ವರದಿಗಾರ ಸುನೀಲ ಕಬ್ಬೂರ, ಸಿಆರ್‌ಪಿ ದಯಾನಂದ ಯರಕದ, ಏಕನಾಥ ಪಡಚೆ, ಮತ್ತಪ್ಪ ಬನಶಂಕರಿ, ಗೋಪಾಲ ಬಿದರಿ, ಮಹಾವೀರ ಹೆಗಡೆ, ಎಸ್.ಎಂ.ಚೌಗಲಾ, ರೇಖಾ ಮೂಡಲಗಿ, ಶಕುಂತಲಾ ಹುಕ್ಕೇರಿ, ಅನ್ನಪೂರ್ಣ ಹಿರೆಕೋಡಿ, ಸಾವಿತ್ರಿ ಬನಶಂಕರಿ, ಮುಖ್ಯ ಶಿಕ್ಷಕ ವಿಶ್ವನಾಥ ಈರಗಾರ, ಸುಭಾಷ ಬಡಿಗೇರ, ಬಸವರಾಜ ಹಿರೇಮಠ ಇತರರಿದ್ದರು.