

ಲಕ್ಷ್ಮೇಶ್ವರ: ಪ್ರತಿ ಮಗುವು ತನ್ನ ಕಲಿಕಾ ಹಿನ್ನೆಲೆ ಲೆಕ್ಕಿಸದೆ ಕೀಳರಿಮೆಯಿಂದ ಹೊರ ಬಂದು ಉತ್ತಮ ಸಾಧನೆ ಮಾಡಬೇಕು ಎಂದು ಬಿಇಒ ಎಚ್.ಎನ್. ನಾಯ್ಕ ಹೇಳಿದರು.
ಪಟ್ಟಣದ ಬಿಸಿಎನ್ ವಿದ್ಯಾ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ಗಣಿತ ಮತ್ತು ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ಮರುಸಿಂಚನ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ‘ಗಣಿತ ಮತ್ತು ವಿಜ್ಞಾನ ವಿಷಯ ಶಿಕ್ಷಕರು ಪಾಠ ಬೋಧನೆ ಪರಿಣಾಮಕಾರಿಯಾಗಲು ಹೊಸ ಬೋಧನೋಪಕರಣಗಳನ್ನು ಬಳಸಬೇಕು’ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ನೋಡಲ್ ಅಧಿಕಾರಿ ಈಶ್ವರ ಮೆಡ್ಲೇರಿ, ಗುಣಾತ್ಮಕ ಮತ್ತು ಪರಿಣಾಮಾತ್ಮಕ ಶಿಕ್ಷಣಕ್ಕಾಗಿ ಮರು ಸಿಂಚನ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳ ಕಲಿಕಾ ನ್ಯೂನತೆ ಹೋಗಲಾಡಿಸಿ ಅವರಲ್ಲಿ ಕಲಿಕೆಯನ್ನು ದೃಢಪಡಿಸುವ ಬಹು ಪ್ರಮುಖ ಗುರಿಯನ್ನು ಹೊಂದಲಾಗಿದೆ ಎಂದರು.
ಬಿಸಿಎನ್ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ನಾಗರಾಜ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಗಳಾದ ಚಂದ್ರಶೇಖರ ವಡಕಣ್ಣವರ, ಸತೀಶ ಬೋಮಲೆ, ಜ್ಯೋತಿ ಗಾಯಕವಾಡ, ಸಂಪನ್ಮೂಲ ಶಿಕ್ಷಕರಾದ ವೈ.ಬಿ. ಪಾಟೀಲ, ನವೀನ ಅಂಗಡಿ, ವೈ. ಎನ್ ಬಾಲಣ್ಣವರ, ಪಿ.ಎಂ. ಹೊಸಂಗಡಿ, ಎಲ್.ಬಿ. ಮತ್ತೂರ, ಸಚಿನ್ ಮಣ್ಣೂರ ಶ್ರೀಕಾಂತ್ ಬಾರ್ಕಿ, ಶ್ರೀಶೈಲ ಭಿಕ್ಷಾವೃತ್ತಿಮಠ, ನಂದೀಶ ಮಂಟೂರ, ನಾಗರಾಜ ಮಜ್ಜಿಗುಡ್ಡ, ಆರ್.ಮಹಾಂತೇಶ, ವಾಸು ದೀಪಾಲಿ, ವೀರೇಶ ಕಮ್ಮಾರ ಇತರರು ಇದ್ದರು. ಸಿಆರ್‌ಪಿ ಉಮೇಶ ನೇಕಾರ ನಿರೂಪಿಸಿದರು. ಕೆ.ಪಿ. ಕಂಬಳಿ ಪ್ರಾರ್ಥಿಸಿದರು. ಎನ್.ಎನ್. ಸಾವಿರಕುರಿ ವಂದಿಸಿದರು.