

ನಂಜನಗೂಡು: ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ ಬಳಕೆಯಿಂದ ದೂರವಿದ್ದು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಗ್ರೇಡ್ 1 ಕಾರ್ಯದರ್ಶಿ ಸಿ.ಕೆ.ವಿಜಯ್ ರಾಜ್ ಮಕ್ಕಳಿಗೆ ಸಲಹೆ ನೀಡಿದರು.
ತಾಲೂಕಿನ ಅರಿವು ಕೇಂದ್ರ ರಾಂಪುರ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಂಥಾಲಯದಲ್ಲಿ ವಾರಪೂರ್ತಿ ಪುಸ್ತಕ ಪ್ರದರ್ಶನವಿರಲಿದ್ದು ಸಾರ್ವಜನಿಕರು ಪುಸ್ತಕಗಳನ್ನು ಎರವಲು ಪಡೆಯಬಹುದಾಗಿದೆ. ಆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಇಒಎಪಿ ಶಶಿಧರ್, ಬಿಲ್ ಕಲೆಕ್ಟರ್ ರಮೇಶ್, ಪುನರ್ವಸತಿ ಕಾರ್ಯಕರ್ತ ಮಹೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹೇಂದ್ರ ಕುಮಾರ್, ಓದುಗರಾದ ಶಿವರಾಮ್, ಗ್ರಂಥಾಲಯ ಮೇಲ್ವಿಚಾರಕ ರುದ್ರಸ್ವಾಮಿ ಇತರರಿದ್ದರು.