

ವಿಜಯಪುರ: ಸ್ಥಳೀಯ ಆದರ್ಶ ನಗರದ ಎಕ್ಸ್‌ಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ- ಪ್ರೌಢ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಸಂಸ್ಥೆಯ ಮುಖ್ಯಸ್ಥ ರಾಜಶೇಖರ ಕೌಲಗಿ ಮಾತನಾಡಿ, ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಸ್ವತಂತ್ರರು.
ಆದರೆ ಈ ನಿರ್ಧಾರ ಕೈಗೊಳ್ಳುವ ಮೊದಲು ತಂದೆ-ತಾಯಿ ಅಥವಾ ಪಾಲಕರಲ್ಲಿ ಚರ್ಚಿಸುವುದು ತುಂಬಾ ಮುಖ್ಯ. ಅವಸರದ ನಿರ್ಧಾರಗಳು ಭವಿಷ್ಯದಲ್ಲಿ ಕೆಟ್ಟ ಪರಿಣಾಮಗಳನ್ನು ಬೀರದಂತೆ ಎಚ್ಚರ ವಹಿಸಬೇಕು ಎಂದರು.
ಇದನ್ನೂ ಓದಿ: ಶಾಂತಿನಿಕೇತನ ಶಾಲೆಯಲ್ಲಿ ಸ್ವಾತಂತ್ರ್ಯ ದಿನ
ನಿವೃತ್ತ ಯೋಧ ಸಂಗಮೇಶ ಎಸ್.ವಾಣಿ, ಮಂಜುನಾಥ ಕೌಲಗಿ, ಮುಖ್ಯಶಿಕ್ಷಕ ಎಂ.ಐ. ಬಿರಾದಾರ ಮಾತನಾಡಿದರು. ಎಸ್.ಬಿ.ಪಾಟೀಲ, ಶಾಲೆ ಪ್ರಧಾನಿ ಸಿಂಧೂರಲಕ್ಷ್ಮಣ ಮೆಟ್ಟಿನ ಹಾಗೂ ಉಪ ಪ್ರಧಾನಿ ತೇಜಸ್ವಿನಿ ಮಾಳಬಗಿ, ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
ಕುಮಾರಿ ಭಾಗ್ಯಶ್ರೀ ಸೋನ್ಯಾಳ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಅಭಿಲಾಷಾ ಬಳ್ಳೊಳ್ಳಿ ನಿರೂಪಿಸಿದರು. ಕುಮಾರಿ ಸಂಜೀವಿನಿ ಮುರುಡಿ ವಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.