ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಲಿ

4
ಯಕ್ಸಂಬಾ ಪಟ್ಟಣದ ಶಿವಶಂಕರ ಜೊಲ್ಲೆ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು. ಡಾ.ಶ್ರದ್ಧಾನಂದ ಸ್ವಾಮೀಜಿ, ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ ಇತರರಿದ್ದರು.
Published on

ಚಿಕ್ಕೋಡಿ: ಮಕ್ಕಳಿಗಾಗಿ ನಾವು ಯಾವ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿಸಿಕೊಂಡು ದೇಶಕ್ಕಾಗಿ ಒಳ್ಳೆಯ ಪ್ರಜೆಗಳನ್ನು ನಿರ್ಮಿಸುವುದು ಅವಶ್ಯಕ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ಶಿವಶಂಕರ ಜೊಲ್ಲೆ ಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ, ಮುಖ್ಯಶಿಕ್ಷಕ ವಿ.ಆರ್. ಭಿವಸೆ ಮಾತನಾಡಿದರು.

ಜೊಲ್ಲೆ ಗ್ರೂಪ್ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಜಯಾನಂದ ಜಾಧವ, ಲಕ್ಷ್ಮಣ ಕಬಾಡೆ, ಬಾಬುರಾವ ಮಾಳಿ, ಅಪ್ಪಾಸಾಬ ಜೊಲ್ಲೆ, ಮಂಗಲ ಜೊಲ್ಲೆ, ಫೈಮೀದಾ ದಾಡಿವಾಲೆ, ಲತಾ ವಾಳಕೆ, ಜೊಲ್ಲೆ ಗ್ರೂಪ್‌ನ ಮುಖ್ಯ ಶಿಕ್ಷಣ ಆಡಳಿತಾಧಿಕಾರಿಗಳಾದ ಡಾ.ಶಿರಿಷ ಕೇರೂರ, ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸೈಟಿ ಸಿಇಒಗಳಾದ ಆರ್.ಸಿ.ಚೌಗಲಾ, ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ, ವಿಜಯ ಖಡಕಬಾವಿ, ಸಹಶಿಕ್ಷಕ ಎಲ್.ಎಸ್‌ಖೋತ, ಅನನ್ಯಾ ಚೌಗಲೆ, ನೇತ್ರಾ ಗಜಬರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net