ಮಕ್ಕಳು ಜಗತ್ತು ಬೆಳಗುವ ದೀಪವಾಗಲಿ

20MGKD1
Published on

ಮುಗಳಖೋಡ: ವಿದ್ಯಾರ್ಥಿಗಳು ಶಿಸ್ತು, ಸಂಸ್ಕಾರ ಅಳವಡಿಸಿಕೊಂಡು ಕಲಿತು ಜಗತ್ತನ್ನು ಬೆಳಗುವ ದೀಪವಾಗಬೇಕು ಎಂದು ಪ್ರದೀಪ ಘಂಟಿ ಮಹಾರಾಜರು ಹೇಳಿದರು.

ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪನವರ ತೋಟದ ಶಾಲೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಶ್ರೀಮಠದ ಜಗದೀಶ ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿದರು. ಸಿಆರ್‌ಪಿ ಬಿ.ಸಿ. ಬಾಗೆನ್ನವರ, ಪಿಎಸ್‌ಐ ಪ್ರೀತಮ ನಾಯಿಕ ಮಾತನಾಡಿದರು. ಸ್ಪರ್ಧೆಯಲ್ಲಿ ವಿಜೇತ ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಪುರಸಭೆ ಸದಸ್ಯ ಪರಶುರಾಮ ಕಡಕೋಳ, ವಿಠ್ಠಲ ಶೇಗುಣಸಿ, ಸಿದ್ದಪ್ಪ ಶೇಗುಣಸಿ, ಬಿ.ಐ. ಹುಣಸಿಕಟ್ಟಿ, ಎಸ್.ಎಸ್. ಮದಾಳೆ, ಡಿ.ವಿ.ನಡಹಟ್ಟಿ , ಅಶೋಕ ಗಸ್ತಿ, ಪ್ರತಾಪ ಶೇಗುಣಸಿ, ವಿಠ್ಠಲ ರಗಟಿ, ಮಾಜಿ ಸೈನಿಕ ಮುರೆಪ್ಪ ಶೇಗುಣಸಿ, ವಿಠ್ಠಲ ಹೊಸೂರ, ಮಸ್ತಾನ್ ತಹಶೀಲ್ದಾರ, ಪಾಂಡು ಚೌಡಕಿ, ಬಾಜಿರಾವ್ ಕುರಾಡೆ, ವೈ.ಕೆ. ಭಜಂತ್ರಿ, ಎಂ.ಎಸ್. ಕಳ್ಳಿಗುದ್ದಿ, ಷಣ್ಮುಖ ನಾವಿ ಇತರರು ಇದ್ದರು. ಎ.ಐ ನಾವಿ ಸ್ವಾಗತಿಸಿದರು. ವೈ.ಎ. ಮುಗಳಖೋಡ ನಿರೂಪಿಸಿದರು. ಎಂ.ಜಿ.ಕುಡ್ಡನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net