ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸಲಿ

3Anand5
ಶೇಖ ಸೆಂಟ್ರಲ್ ಸ್ಕೂಲ್‌ನಲ್ಲಿ ನಡೆದ ಶಾಲಾ ಪೂರ್ವ ಪದವಿ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ನಹಿದಾ, ರೂಪಾ ಸಕ್ರಿ, ಶಿಕ್ಷಕಿ ಆಯೇಷಾ ದೇಸಾಯಿ ಇತರರಿದ್ದರು.
Published on

ಬೆಳಗಾವಿ: ಶಾಲಾ ಪೂರ್ವ ಶಿಕ್ಷಣ ಮಗುವಿನ ಭವಿಷ್ಯದ ಭದ್ರ ಬುನಾದಿಯಾಗಿದೆ. ಮಗು ಶಾಲೆಗೆ ತೆರಳುವ ಮುನ್ನವೇ ಮಾನಸಿಕ, ಬೌದ್ಧಿಕವಾಗಿ ಸಿದ್ಧಗೊಳಿಸಬೇಕು ಎಂದು ಶೇಖ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ನಹಿದಾ ಹೇಳಿದರು.

ನಗರದ ಶೇಖ ಸೆಂಟ್ರಲ್ ಸ್ಕೂಲ್‌ನಲ್ಲಿ ಈಚೆಗೆ ನಡೆದ ಶಾಲಾ ಪೂರ್ವ ಪದವಿ ಎಂಬ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಸಂಸ್ಥೆಯ ಬಿಸಿಎ ಕಾಲೇಜಿನ ಪ್ರಾಚಾರ್ಯ ರೂಪಾ ಸಕ್ರಿ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ನಂತರ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಆಯೇಷಾ ದೇಸಾಯಿ , ಪ್ರೀತಿ, ಶೀಲಾ, ಅಲ್ತಾಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net