ಆಚರಣೆ ದಿನಕ್ಕೆ ಸೀಮಿತವಾಗದಿರಲಿ

6Athni2
Published on

ಅಥಣಿ: ಇಂದು ಜಾಗತಿಕ ತಾಪಮಾನ ತಡೆಯದಿದ್ದರೆ, ಜಗತ್ತಿಗೆ ಉಳಿಗಾಲವಿಲ್ಲ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಗಿಡ ದತ್ತು ನೀಡಿ ಉದ್ಯಾನವನ್ನು ಅತ್ಯಂತ ಸುಂದರವಾಗಿ ರೂಪಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಅರಣ್ಯ ಇಲಾಖೆಯ ಮಕ್ಕಳ ಉದ್ಯಾನವನದಲ್ಲಿ ಶುಕ್ರವಾರ ಪ್ರಾದೇಶಿಕ ಅರಣ್ಯ ವಲಯ ಅಥಣಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಯೋಗಾಸನ ಕಟ್ಟೆ ಉದ್ಘಾಟನೆ ಮತ್ತು ವಿಶ್ವ ಪರಿಸರ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬದುಕಿಗೆ ಯೋಗ ಮತ್ತು ಪರಿಸರ ಎರಡು ಮುಖ್ಯ ಅಂಗಗಳು. ಕೇವಲ ಪರಿಸರ ದಿನ ಆಚರಣೆಗೆ ಮಾತ್ರ ಸೀಮಿತವಾಗದೆ, ಮಕ್ಕಳ ಉದ್ಯಾನವನ ಅಭಿವೃದ್ಧಿಗೊಳಿಸಬೇಕು. ಮುಂಬರುವ ದಿನಗಳಲ್ಲಿ ಸುಂದರ ಗಾಜಿನ ಮನೆ ನಿರ್ಮಿಸಿ ಯೋಗ ಹಾಗೂ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.

ಉದ್ಯಾನವನಕ್ಕೆ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡಲಾಯಿತು.

ತಹಸೀಲ್ದಾರ್ ಸಿದರಾಯ ಭೋಸಗಿ, ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಅರಣ್ಯಾಧಿಕಾರಿಗಳಾದ ರಾಕೇಶ ಅರ್ಜುನವಾಡ, ಪ್ರಶಾಂತ ಗೌರಾಣಿ, ಎಸ್.ಎಂ.ಮುಂಜೆ, ತಾಪಂ ಇಒ ಶಿವಾನಂದ ಕಲ್ಲಾಪುರ,ಅಶೋಕ ಗುಡಿಮನಿ, ಶಿವಾನಂದ ಮಾಲಗಾವಿ, ರಾಜು ಗುಡೊಡಗಿ, ಶಶಿಕಾಂತ ಹುಲಕುಂದ, ಶ್ರೀಶೈಲ ಪಾಟೀಲ, ಡಿ.ಡಿ.ಮೆಕನಮರಡಿ, ಮಾರುತಿ ಸತಿಗೌಡರ, ಮಂಜುನಾಥ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net