ತ್ವರಿತ ನ್ಯಾಯಾಲಯದಲ್ಲಿ ಪ್ರಕರಣ ತನಿಖೆಯಾಗಲಿ

Let the case be investigated in a fast-track court.
ಮಹಾಲಿಂಗಪುರದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿದರು. ಅನಿಲ ಕಿರಿಕಿರಿ, ಮಹಾಂತೇಶ ಗುಡೇಜಾಡರ ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಹಿಂದು ಬಾಲಕಿಯರ ಸುರಕ್ಷತೆಗೆ ಸವಾಲಾಗಿರುವ ಹೇಯ ಕೃತ್ಯ ಅಮ್ಜದ್ ಎಂಬ ರಾಕ್ಷಸನಿಂದ ನಡೆದಿದ್ದು, ಅದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಶ್ರೀರಾಮ ಸೇನಾ ಉಪಾಧ್ಯಕ್ಷ ಮಹಾಲಿಂಗಪ್ಪ ಗುಂಜಿಗಾಂವಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಔಷಧ ಅಂಗಡಿಗೆ ಬರುತ್ತಿದ್ದ ಹಿಂದು ಹೆಣ್ಣು ಮಕ್ಕಳನ್ನು ಪುಸಲಾಯಿಸಿ, ಹೆದರಿಸಿ ಹಾಗೂ ಮತ್ತು ಬರುವ ಮಾತ್ರೆ ನೀಡಿ ಅತ್ಯಾಚಾರ ಮಾಡಿ, ಅದರ ವಿಡಿಯೋವನ್ನು ಮುಸ್ಲಿಂರ ವಾಟ್ಸಪ್ ಗ್ರುಪ್‌ನಲ್ಲಿ ಹರಿಬಿಟ್ಟಿದ್ದಾನೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಕುಕೃತ್ಯದ ಹಿಂದಿರುವ ಆರೋಪಿಗಳನ್ನು ಬಂಧಿಸಬೇಕು. ಶೋಷಣೆಗೆ ಒಳಗಾದವರಿಗೆ ಪರಿಹಾರ, ರಕ್ಷಣೆ, ವೈದ್ಯಕೀಯ ನೆರವು ನೀಡುವುದರ ಜತೆಗೆ ದೂರು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಬೇಕು. ಈ ಜಾಲ ಬೇರೆ ಜಿಲ್ಲೆಗಳಲ್ಲಿಯೂ ಹರಡಿರುವ ಸಾಧ್ಯತೆ ಇದ್ದು, ಮಹಿಳಾ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಲವ್ ಜಿಹಾದ್, ಬೇರೆ ದೇಶಗಳಿಗೆ ಮಾರಾಟದ ಬಗ್ಗೆಯೂ ಸಂಶಯವಿದ್ದು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಶ್ರೀರಾಮ ಸೇನೆಯ ಅನಿಲ ಕಿರಿಕಿರಿ, ಮಹಾಂತೇಶ ಗುಡೇಜಾಡರ, ಮಹಾಲಿಂಗಪ್ಪ ಹೊಸಪೇಟಿ, ಗಂಗಾಧರ ಗುರವ, ಸಿದ್ದು ಖೋತ, ಚೇತನ ಬರಡೋಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net