

ಯಲ್ಲಾಪುರ: ನಗರದ ಜನನಿಬಿಡ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ರಾಜ್ಯ ಹೆದ್ದಾರಿ ಬಂದು ಸೇರುವ ಸ್ಥಳ ಮೊದಲೇ ಸ್ವಲ್ಪ ಅಪಾಯಕಾರಿಯಾಗಿ ಗುರುತಿಸಲ್ಪಟ್ಟಿದೆ. ಶಿರಸಿ ಕಡೆಯಿಂದ ಬರುವ ವಾಹನಗಳು ಹಾಗೂ ಹುಬ್ಬಳ್ಳಿ ಮತ್ತು ಅಂಕೋಲಾ ಕಡೆಯಿಂದ ಬರುವ ವಾಹನಗಳು ಒಂದೇ ಕಡೆ ಸೇರುವುದರಿಂದ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗುತ್ತದೆ. ಯಲ್ಲಾಪುರ ಬಸ್ ನಿಲ್ದಾಣದಿಂದ ಹುಬ್ಬಳ್ಳಿ, ಹಳಿಯಾಳ ಹಾಗೂ ಹಳ್ಳಿಗಳಿಗೆ ಹೋಗುವ ಬಸ್ಗಳು ಕೂಡಾ ಈ ಮೂರು ಪ್ರಧಾನ ರಸ್ತೆ ಸೇರುವಲ್ಲಿಯೇ ನಿಂತು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತವೆ. ಅಲ್ಲಿ ಬಸ್ ನಿಂತಾಗ ಹೆಚ್ಚಿನ ಪ್ರಮಾಣದ ಅಪಾಯವಾಗುವ ಸಾಧ್ಯತೆ ಇದೆ. ಅಲ್ಲಿಂದ ಕೇವಲ ಮೂವತ್ತು ಮೀಟರ್ ದೂರದಲ್ಲಿ ಬಸ್ ತಂಗುದಾಣವಿದೆ. ಅಲ್ಲಿಯೇ ಬಸ್ ನಿಂತರೆ ಅಪಾಯದ ಸಾಧ್ಯತೆಗಳು ತೀರ ಕಡಿಮೆ. ಹೆಚ್ಚಿನ ಅಪಾಯ ಆಗುವ ಮೊದಲೇ ಬಸ್ಗಳು ಬಸ್ ತಂಗುದಾಣದ ಎದುರೇ ನಿಲ್ಲುವಂತಾಗಬೇಕು.
| ಬೀರಣ್ಣ ನಾಯಕ ಮೊಗಟಾ