ಶಾಲೆ ಸಮಯಕ್ಕೆ ಬಸ್ ಸಂಚರಿಸಲಿ - ಸೌಕರ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಪ್ರತಿಭಟನೆ

19 KAMPLI 04
ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ಮುಂದೆ ವಿದ್ಯಾರ್ಥಿಗಳು ಬಸ್ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.
Published on

ಕಂಪ್ಲಿ: ಸಕಾಲಕ್ಕೆ ಶಾಲೆಗೆ ತೆರಳಲು ಬಸ್ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ನಂ.10 ಮುದ್ದಾಪುರ ಗ್ರಾಪಂ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ನಂ.10ಮುದ್ದಾಪುರದಿಂದ ರಾಮಸಾಗರ ಶಾಲೆಗೆ ನಿತ್ಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದರೂ ಸಕಾಲಕ್ಕೆ ಬಸ್ ಇಲ್ಲದಂತಾಗಿದೆ. ಇದರಿಂದ ಪಾಠದಿಂದ ವಂಚಿತರಾಗುವುದು, ವಿಶೇಷ ತರಗತಿಗಳಿಗೆ ಹೋಗದಂತಾಗಿದೆ. ಆದ್ದರಿಂದ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಬಸ್ ಸೌಕರ್ಯ ಕಲ್ಪಿಸಬೇಕು. ಸಾರಿಗೆ ಸೌಕರ್ಯ ಒದಗಿಸಲು ಗ್ರಾಮಾಡಳಿತವೂ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳಾದ ಯು.ಚಿನ್ನಾ, ಶ್ರೀವಿದ್ಯಾ, ಪಲ್ಲವಿ, ಸುಪ್ರೀತಾ, ರುದ್ರಾವೇಣಿ, ಸಂಜನಾ, ಸಂಜಯ್, ದುರುಗೇಶ, ಗಣೇಶ, ಸಂತೋಷ, ಮನೋಜ, ಸುನೀಲ್, ರಾಮು, ಕುಮಾರ್, ಸಂತೋಷ್ ಒತ್ತಾಯಿಸಿದರು.

ಪಿಡಿಒ ಶಿಲ್ಪಾರಾಣಿ ಮಾತನಾಡಿ, 2024ರ ಫೆ.4ರಂದು ಕಕ.ಸಾರಿಗೆ ಸಂಸ್ಥೆ ಕುರುಗೋಡು ಡಿಪೋ ಮ್ಯಾನೇಜರ್‌ಗೆ ಪತ್ರ ಬರೆಯಲಾಗಿದೆ. ಒಂದೆರೆಡು ದಿನ ಬಂದು ನಂತರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮತ್ತೊಮ್ಮೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net