ಬಿಜೆಪಿ ಸದಸ್ಯತ್ವ ಅಭಿಯಾನ ಸಮರೋಪಾದಿಯಲ್ಲಿ ನಡೆಯಲಿ

Let the BJP membership campaign be conducted in Samaropadi
ಲೋಕಾಪುರ ಪಟ್ಟಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು. ವಿ.ಎಂ. ತೆಗ್ಗಿ, ಲೋಕಣ್ಣ ಕತ್ತಿ, ಬಿ.ವಿ. ಹಲಕಿ, ಪರಮಾನಂದ ಟೊಪಣ್ಣವರ ಇತರರಿದ್ದರು.
Published on

ಲೋಕಾಪುರ: ಭಾರತೀಯ ಜನತಾ ಪಕ್ಷ ದೇಶದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಕೆಲಸ ಮಾಡುವ ಅಪರೂಪದ ಪಕ್ಷ ಇದಾಗಿದ್ದು, ದೇಶಾದ್ಯಂತ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಪಟ್ಟಣದ ಕಾಡರಕೊಪ್ಪ ರಸ್ತೆಯ ಶಂಭುಲಿಂಗಾನಂದ ಮಠದಲ್ಲಿ ಬುಧವಾರ ಬಿಜೆಪಿ ಸದಸ್ಯತ್ವ ಅಭಿಯಾನ ಮತ್ತು ವಿವಿಧ ಪದಾಧಿಕಾರಿಗಳ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರಗಳ ಪ್ರಮುಖರು ಇನ್ನಷ್ಟು ಚುರುಕಾಗಬೇಕು. ಬೂತ್ ಅಧ್ಯಕ್ಷರು ಹಾಗೂ ತಂಡದವರ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ತಮ್ಮ ತಂಡದೊಂದಿಗೆ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸದಸ್ಯರ ನೋಂದಣಿ ಮಾಡಬೇಕು. ಮೊದಲಿಗೆ ತಾವು ಸ್ವತಃ ಸದಸ್ಯತ್ವ ಪಡೆದುಕೊಂಡು ಬಳಿಕ ತಮ್ಮ ಮನೆಯ ಸದಸ್ಯರು ಮತ್ತು ಗ್ರಾಮಸ್ಥರ ಹೆಸರನ್ನು ನೋಂದಾಯಿಸಬೇಕು ಎಂದು ತಿಳಿಸಿದರು.

ಬಿಜೆಪಿ ಯುವ ಮುಖಂಡ ಅರುಣ ಕಾರಜೋಳ ಮಾತನಾಡಿ, ಪಕ್ಷದ ಸದಸ್ಯತ್ವ ಪಡೆದವರಿಗೆ ಪಕ್ಷವೂ ಸೂಕ್ತ ಸ್ಥಾನಮಾನ ಮತ್ತು ಪ್ರಾತಿನಿಧ್ಯ ಕಲ್ಪಿಸುತ್ತದೆ. ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಕಾರ್ಯಕರ್ತರಿಗೆ ಪಕ್ಷವು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ಕಾರ್ಯಕರ್ತರು ಹೆಚ್ಚೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಮಾತನಾಡಿ, ದೂ: 8800002024 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಪಕ್ಷದ ಸದಸ್ಯರಾಗಲು ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು.

ಪಕ್ಷದ ವಿವಿಧ ಪದಾಧಿಕಾರಿಗಳನ್ನು ಸಂಸದ ಪಿ.ಸಿ. ಗದ್ದಿಗೌಡರ, ಅರುಣ ಕಾರಜೋಳ, ಸಂಗನಗೌಡ ಕಾತರಕಿ, ನಾಗಪ್ಪ ಅಂಬಿ, ಲೋಕಣ್ಣ ಕತ್ತಿ ಸನ್ಮಾನಿಸಿದರು.

ನಾಗಪ್ಪ ಅಂಬಿ, ಕೆಎಂಎ್ ನಿರ್ದೇಶಕ ವಿವೇಕಾನಂದ ಪಾಟೀಲ, ಶ್ರೀಶೈಲಗೌಡ ಪಾಟೀಲ, ವಿ.ಎಂ. ತೆಗ್ಗಿ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಪರಮಾನಂದ ಟೊಪಣ್ಣವರ, ಬಿ.ಎಲ್. ಬಬಲಾದಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ಜಿಪಂ ಮಾಜಿ ಸದಸ್ಯ ಬಿ.ವಿ. ಹಲಕಿ, ವಿರೇಶ ಪಂಚಕಟ್ಟಿಮಠ, ಶಿವಪ್ಪ ಚೌಧರಿ, ವಿನೋದ ಘೋರ್ಪಡೆ, ಅರುಣ ನರಗುಂದ, ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತಗೌಡ ಪಾಟೀಲ, ವಸಂತಗೌಡ ಪಾಟೀಲ, ಆನಂದ ಹವಳಖೋಡ, ಕೃಷ್ಣಾ ಸಾಳುಂಕಿ, ಅರುಣ ಮುಧೋಳ, ಗೋಪಾಲಗೌಡ ಪಾಟೀಲ, ಸುರೇಶ ಹುಗ್ಗಿ, ಹುಸೇನಪ್ಪ ರುದ್ರಾಕ್ಷಿ, ಕೃಷ್ಣಾ ಹೂಗಾರ, ರವಿ ಚೌಧರಿ, ಶಾಂತಾ ಹಣಗಲಿ, ದೇವಣ್ಣ ದಾಸರಡ್ಡಿ, ಎಸ್.ಎಂ. ಹಗ್ಗದ ಪಟ್ಟಣದ ಹಾಗೂ ವಿವಿಧ ಗ್ರಾಮದ ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net