

ಮೈಸೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಅಧ್ಯಕ್ಷತೆಯಲ್ಲಿ 21 ಹಾಗೂ 22ನೇ ಎಂಎಸ್‌ಇಎಫ್‌ಸಿ ವಿಚಾರಣೆಯಲ್ಲಿ ಸೂಕ್ಷ್ಮ್ಮ, ಸಣ್ಣ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 55 ಪ್ರಕರಣಗಳನ್ನು ಸಂಧಾನ ನಡೆಸಲಾಯಿತು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ ಕಾಯ್ದೆ-2006 (ಎಂಎನ್‌ಎಇಡಿ-2006) ರ ಅನ್ವಯ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು ಸರಬರಾಜು ಮಾಡಿದ ವಸ್ತುಗಳು ಅಥವಾ ಸೇವೆಗಳಿಗೆ ಖರೀದಿದಾರರು ಹಣವನ್ನು ನಿಗದಿತ ದಿನಾಂಕದೊಳಗೆ ಪಾವತಿ ಮಾಡಲು ವಿಳಂಬವಾದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾಗೇಶ್, ಸರ್ಕಾರಿ ಅಭಿಯೋಜಕ ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.
ವಿಚಾರಣೆಯಲ್ಲಿ ಒಟ್ಟು 7 ಖರೀದಿದಾರರಿಂದ 42,75,054 ರೂ. ಅನ್ನು ಸರಬರಾಜುದಾರರಿಗೆ ಸಂಧಾನದ ಮೂಲಕ ಪಾವತಿಸಲಾಗಿದೆ ಎಂದು ಎಂಎಸ್‌ಇಎಫ್‌ಸಿ ಸದಸ್ಯ ಕಾರ್ಯದರ್ಶಿಯೂ ಆದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ತಿಳಿಸಿದ್ದಾರೆ.