ಅಧಿಕಾರಿಗಳು ಸಾರ್ವಜನಿಕರನ್ನು ಗೌರವದಿಂದ ಕಾಣಲಿ

JYD ADALITA SOUDA
Published on

ಜೊಯಿಡಾ: ಅಧಿಕಾರಿಗಳು ಸಾರ್ವಜನಿಕರನ್ನು ಗೌರವದಿಂದ ಕಾಣಬೇಕು. ಬಂದವರನ್ನು ಕಚೇರಿಯಲ್ಲಿ ಕುಳ್ಳಿರಿಸಿ ಅವರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಶಾಸಕ ಅರ್.ವಿ. ದೇಶಪಾಂಡೆ ಸಲಹೆ ನೀಡಿದರು.

ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಆಡಳಿತ ಸೌಧ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದೆ ತಾಲೂಕಿನಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸವಾಲಾಗಿತ್ತು. ಬಳಿಕ ಎಲ್ಲರ ಸಹಕಾರದಿಂದ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ತಾಲೂಕಿಗೆ ಮೂಲಸೌಕರ್ಯ ಒದಗಿಸಲಾಯಿತು. ಪ್ರಸ್ತುತ ರೆಸಾರ್ಟ್, ಹೊಂ ಸ್ಟೆ ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಜಿಲ್ಲೆಯ 12 ತಾಲೂಕಿನಲ್ಲಿ ಮಿನಿ ವಿಧಾನಸೌಧ ಆಗಿದೆ. 6 ತಿಂಗಳಲ್ಲಿ ಡಿಜಿಟಲ್ ರೆಕಾರ್ಡ್ ಮಾಡುವ ಯೋಜಿಸಲಾಗಿದೆ. ತಹಸೀಲ್ದಾರ್ ಕೋರ್ಟ್ ಪ್ರಕರಣದಲ್ಲೂ 60 ದಿನದಲ್ಲಿ ನಿರ್ಣಯ ಅಂತಿಮ ಮಾಡಿ ಆದೇಶ ಹೊರಡಿಸಲು ತಿಳಿಸಲಾಗಿದೆ ಎಂದರು.

ಎಸಿ ತನಿಷ್ಕ, ಜೊಯಿಡಾ ಗ್ರಾಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಲೋಕೋಪಯೋಗಿ ಇಲಾಖೆಯ ಇಇ ಮಲ್ಲಿಕಾರ್ಜುನ ಎಚ್, ತಹಸೀಲ್ದಾರ್ ಮಂಜುನಾಥ ಮುನ್ನೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಇತರರು ಉಪಸ್ಥಿತರಿದ್ದರು.

ಶಿವಪ್ರಕಾಶ ಎಸ್., ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಷ್ಣು ಪಟಗಾರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net