

ಬೈಲಕುಪ್ಪೆ: ಬೈಲಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದನೇ ಕ್ಯಾಂಪ್‌ನ ಟಿಬೇಟಿಯನ್ ಎಸ್‌ಒಎಸ್ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಶನಿವಾರ ರೇಷ್ಮೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು.
ಎಸ್‌ಒಎಸ್ ಶಾಲೆ ಆವರಣದಲ್ಲಿ ಟಿಬೆಟಿಯನ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದ್ದು, ಶಾಲಾ ಕಾಲೇಜು ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಇಲ್ಲಿನ ರಸ್ತೆಗಳು ಹದಗೆಟ್ಟಿದ್ದರಿಂದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದರೆ ಸಮಸ್ಯೆ ಇರುವುದಿಲ್ಲ ಎಂದರು.
ಮನೆ, ರಸ್ತೆ, ಡ್ರೈನೇಜ್, ಸಮುದಾಯ ಭವನ ವಿವಿಧ ಬೇಡಿಕೆಗಳನ್ನು ಬೈಲಕುಪ್ಪೆ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸಚಿವರ ಮುಂದಿಟ್ಟರು. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಚರ್ಚಿಸಿದರಲ್ಲದೆ, ಅಗತ್ಯ ಕ್ರಮ ವಹಿಸುವುದಾಗಿ ಭರವೆ ನೀಡಿದರು.
ಟಿಬೇಟಿಯನ್ ಎಂಪಿ ಸೋಮ್ ಫಲ್ ತುಂಡು ಮಾತನಾಡಿದರು. ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಮುಖಂಡರಾದ ರೆಹಮದ್ ಜಾನ್ ಬಾಬು, ಪುಟ್ಟರಾಜ್, ಶೇಖರ್, ಧನರಾಜ್, ಪ್ರಕಾಶ್, ಪಿಡಿಒ ಬೋರೇಗೌಡ, ಗ್ರಾಪಂ ಸದಸ್ಯರಾದ ರಾಜು, ಮಂಜು, ರಘು, ನಿಶಾರ್, ದಾಹುದ್, ಹರೀಶ್ ಇತರರಿದ್ದರು.