

ರಾಯಬಾಗ: ಸರ್ಕಾರದ ಆದೇಶದ ಮೇರೆಗೆ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗಾಗಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ತಾಲೂಕಿನ ಎಲ್ಲ ಜನರು ಮಾಹಿತಿ ನೀಡಿ ಅಧಿಕಾರಿಗಳಿಗೆ ಸಹಕರಿಸಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದ ಸಾಯಿನಗರದಲ್ಲಿ ಸೋಮವಾರ ಸುಧೀರ ಕಳ್ಳೆ ಮನೆಗೆ ಸಮೀಕ್ಷೆ ತಂಡದೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮೀಕ್ಷೆಗಾಗಿ ಬರುವ ಶಿಕ್ಷಕರಿಗೆ ನಿಖರವಾಗಿ ಎಲ್ಲ ಮಾಹಿತಿ ನೀಡಿ, ಸಮೀಕ್ಷೆ ಯಶಸ್ಸಿಗೆ ಸಹಕರಿಬೇಕು. ದತ್ತಾಂಶಗಳನ್ನು ಆಂಡ್ರಾಯ್ಡಾ ಆ್ಯಪ್ ಮೂಲಕ ಮೊಬೈಲ್‌ಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ನಿಖರ ಮಾಹಿತಿ ನೀಡುವಂತೆ ಕೋರಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್. ಚಂದರಗಿ, ಶಿಕ್ಷಕಿ ಶ್ರೀದೇವಿ ಪಾಟೀಲ, ತಾರಾಬಾಯಿ ಕಳ್ಳೆ, ಸುಧೀರ ಕಳ್ಳೆ ಇದ್ದರು.