

ಕಾಗವಾಡ: ಬಿಜೆಪಿ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಈಗಿರುವ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಆರೋಪಿಸಿದರು.
ತಾಲೂಕಿನ ಅಥಣಿ ಶುಗರ್ಸ್ ಕಾರ್ಖಾನೆಯ ಕೆಂಪವಾಡದ ಕೇಂದ್ರ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಮಂಡಲದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿ, ನಾನು ಸದಾ ಕಾರ್ಯಕರ್ತರ ಬೆನ್ನೆಲುಬಾಗಿ ಇರುತ್ತೇನೆ. ಕೆಂದ್ರ ಸರ್ಕಾರದ ಯೋಜನೆಗಳ ಮಾಹಿತಿಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು. ಪ್ರತಿ ಬೂತ್‌ನಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಮಾತನಾಡಿ, ಬಿಜೆಪಿ 11 ವರ್ಷಗಳಲ್ಲಿ ಮಾಡಿರುವ ಸಾಧನೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡುವಲ್ಲಿ ಕಾರ್ಯಕರ್ತರು ಮುಂದಾಗುವಂತೆ ತಿಳಿಸಿದರು.
ಡಾ. ಶ್ಯಾಮಾಪ್ರಸಾದ್ ಮುಖರ್ಜಿ ಬಲಿದಾನ ದಿನ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮುಖಂಡರಾದ ದಾದಾಗೌಡ ಪಾಟೀಲ, ಶಿವಾನಂದ ಪಾಟೀಲ, ನಿಂಗಪ್ಪ ಖೋಕಲೆ, ಅಭಯ ಮಾನ್ವಿ, ಮುರಗೆಪ್ಪ ಮಗದುಮ್, ಪ್ರಮೋದ ಹೊಸೂರೆ, ಅಪ್ಪಾಸಾಹೇಬ ಮಳಮಳಸಿ, ಮನೋಜ ಕುಸನಾಳೆ, ಭರತ ಹೊಸೂರೆ, ರಾಕೇಶ ಪಾಟೀಲ, ಕಿರಣ ಯಂದಗೌಡರ, ಅಪ್ಪಣ್ಣ ಮುಜಗೋನವರ, ಆರ್.ಎಂ.ಪಾಟೀಲ, ಈಶ್ವರ ಕುಂಬಾರೆ, ಸುಧಾಕರ
ಭಗತ್, ಅಭಯ ಪಾಟೀಲ, ಉತ್ಕರ್ಷ ಪಾಟೀಲ, ಪ್ರಫುಲ ಥೋರುಸೆ, ರಾಕೇಶ ಕಾಂಬಳೆ, ಪ್ರವೀಣ
ಕೆಂಪವಾಡೆ ಇತರರು ಇದ್ದರು.