

ಬೈಂದೂರು: ರಾಷ್ಟ್ರೀಯ ಸ್ವಯಂಸೇವಕ ಸಂವು ನನ್ನೆಲ್ಲ ಕೆಲಸಕ್ಕೆ ಪ್ರೇರಣೆಯಾಗಿದೆ. ಪ್ರತಿಯೊಬ್ಬ ಸಂದ ಕಾರ್ಯಕರ್ತರು ದೇಶದ ಚಿಂತನೆಯೊಂದಿಗೆ ವಿಕಸಿತ ಭಾರತದ ಕನಸು ನನಸಾಗಿಸಲು ಮತ್ತು ಭಾರತವನ್ನು 2047ರ ವೇಳೆಗೆ ಪ್ರಪಂಚದಲ್ಲಿ ಅಗ್ರಗಣ್ಯ ರಾಷ್ಟ್ರವನ್ನಾಗಿ ವಾಡಲು ಸಂದ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ರಾಜ್ಯಸಭಾ ಸದಸ್ಯ, ಕೇರಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸಿ.ಸದಾನಂದ ವಾಸ್ಟರ್ ಹೇಳಿದರು.
ಬಿಜೆಪಿ ಬೈಂದೂರು ಮಂಡಲ ಮತ್ತು ಉಪ್ಪುಂದ ಕಾರ್ಯಕರ್ತರ ಕಚೇರಿಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಕಾರ್ಯಕರ್ತರು ಅವರನ್ನು ಸನ್ಮಾನಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಮರವಂತೆ ವಾತನಾಡಿ, ಸದಾನಂದ ವಾಸ್ಟರ್ ಅವರ ಜೀವನವು ನಮ್ಮೆಲ್ಲ ಕಾರ್ಯಕರ್ತರಿಗೆ ಆದರ್ಶ ಮತ್ತು ಸ್ಫೂರ್ತಿಯಾಗಿದೆ. ಪ್ರತಿಯೊಬ್ಬ ಸಂದ ಕಾರ್ಯಕರ್ತರು ದೇಶದ ಚಿಂತನೆಯೊಂದಿಗೆ ಸ್ವಾರ್ಥ ರಹಿತ ಕೆಲಸ ವಾಡಿದರೆ ಸಂವು ಅವರನ್ನು ಗುರುತಿಸಿ ಸವಾಜದ ಕೆಲಸವನ್ನು ವಾಡಲು ಹೆಚ್ಚಿನ ಜವಾಬ್ದಾರಿ ನೀಡುತ್ತದೆ ಎನ್ನುವುದಕ್ಕೆ ಸದಾನಂದ ವಾಸ್ಟರ್ ಉದಾಹರಣೆ ಎಂದರು. ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಕರುಣ್ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಗಣೇಶ ಉಪ್ಪುಂದ ವಂದಿಸಿದರು.