ಜ್ಞಾನ ಸಂಪಾದನೆಯೇ ಉದ್ದೇಶವಾಗಲಿ

bharathi
ಶೃಂಗೇರಿ ಶ್ರೀ ಶಾರದಾ ಪೀಠದ ಗುರುಭವನದಲ್ಲಿ ವೇದಾಂತ ಶಿಬಿರದ ಶಿಬಿರಾರ್ಥಿಗಳಿಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಶೃಂಗೇರಿ: ಜ್ಞಾನ ಸಂಪಾದನೆಯೇ ಜೀವನದ ಮುಖ್ಯ ಉದ್ದೇಶವಾಗಿರಬೇಕು ಎಂದು ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳೀದರು.

ಮಠದ ಗುರು ನಿವಾಸದಲ್ಲಿ ಸೋಮವಾರ ವೇದಾಂತ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಜ್ಞಾನ ಸಂಪಾದನೆಯಿಂದ ಮನುಷ್ಯನಿಗೆ ಮೋಕ್ಷ ದೊರಕುತ್ತದೆ. ಬಟ್ಟೆಗೆ ಬೆಂಕಿ ತಗುಲಿದರೆ ಆತ ಬೆಂಕಿ ಆರಿಸಿಕೊಳ್ಳಲು ನೀರನ್ನು ಮೊದಲು ಆಶ್ರಯಿಸುತ್ತಾನೆ. ಆತನಿಗೆ ಆ ಸಮಯದಲ್ಲಿ ಹಣ, ಸಂಪತ್ತು ಯಾವುದೂ ಅಗತ್ಯವಿರದೆ ನೀರಿಗಾಗಿ ಹಂಬಲಿಸುತ್ತಾನೆ. ಅದೇ ರೀತಿ ಶಿಬಿರಾರ್ಥಿಗಳು ಜ್ಞಾನ ವೃದ್ಧಿಗೆ ದೊರಕಿರುವ ಅವಕಾಶ ಬಳಸಿಕೊಳ್ಳಬೇಕು. ಶ್ರೀ ಆದಿ ಶಂಕರಚಾರ್ಯರು ಜ್ಞಾನ ಸಂಪಾದನೆ ಹೇಗೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ವೇದಾಂತ ವಿಚಾರವನ್ನು ಪ್ರತಿಯೊಬ್ಬರೂ ಅರಿಯಬೇಕು. ನನಗೆ ಸಾಧ್ಯವಿಲ್ಲ ಎಂಬುದನ್ನು ಬಿಟ್ಟು ಕಲಿಯಬೇಕು ಎಂಬ ಆಶಯ, ಛಲವಿದ್ದರೆ ಯಾವುದೇ ವಿಷಯವನ್ನು ಕಲಿಯಬಹುದು ಎಂದರು.
ಕೆರೆಮನೆ ಶ್ರೀನಿಕೇತನದಲ್ಲಿ ಅಹಂ ಬ್ರಹ್ಮಾಸ್ಮಿ ಟ್ರಸ್ಟ್ ಆಯೋಜಿಸಿರುವ ಎರಡನೇ ವೇದಾಂತ ಶಿಬಿರದ ಶಿಬಿರಾರ್ಥಿಗಳು ಜಗದ್ಗುರುಗಳಿಗೆ ಫಲ, ಪುಷ್ಪ ಸಮರ್ಪಿಸಿದರು.
ಜಗದ್ಗುರುಗಳ ಆಪ್ತ ಸಹಾಯಕರಾದ ಕೃಷ್ಣಮೂರ್ತಿ ಭಟ್, ಶಮಂತ ಶರ್ಮ, ಶಿಬಿರದ ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net