ಮಹಾನ್ ಪುರುಷರ ಸಾಧನೆ ಅಳವಡಿಸಿಕೊಳ್ಳಲಿ

23mnd1 Nuliya chandayya
Published on

ಮುಂಡಗೋಡ: ಸಾಧನೆ ಮಾಡಿದ ಪ್ರತಿಯೊಬ್ಬ ಮಹಾನ್ ಪುರುಷರ ಸಾಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲಹೇಳಿದರು.


ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂಲಿಯ ಚಂದಯ್ಯನವರ 917ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಕೆಳ ಜಾತಿ, ಮೇಲು ಜಾತಿ ಎನ್ನುವುದು ಇಲ್ಲ. ಎಲ್ಲರೂ ಸಮಾನರು. ಸಾಧನೆ ಮಾಡಿದ ಪ್ರತಿಯೊಬ್ಬ ವ್ಯಕ್ತಿಯೂ ದೊಡ್ದ ವ್ಯಕ್ತಿಯಾಗುತ್ತಾನೆ ಎಂದರು.
ನಂತರ ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ನೂಲಿಯ ಚಂದಯ್ಯ ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲ ಸಮುದಾಯದ ಮಹಾನ್ ಪುರುಷ ಎಂದರು.


ತಹಸಿಲ್ದಾರ್ ಶಂಕರ ಗೌಡಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ., ಹನಮಂತ ಭಜಂತ್ರಿ, ಹನಮಂತಪ್ಪ ಕೊರವರ್, ಸಮಾಜದ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net