

ಚಿಕ್ಕೋಡಿ: ರಾಜ್ಯ ಸರ್ಕಾರಿ ನೌಕರರು 2022ರ ಜನವರಿ 1ರಿಂದ 2024ರ ಜುಲೈ 31ರ ಮಧ್ಯದಲ್ಲಿ ಸೇವಾ ನಿವೃತ್ತಿ ಹೊಂದಿದವರಿಗೆ 7ನೇ ವೇತನದಲ್ಲಾದ ವ್ಯತ್ಯಾಸ ಸರಿಪಡಿಸುವಂತೆ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನಿವೃತ್ತ ನೌಕರರ ಸಂಘದ ರಾಜ್ಯ ಸಂಚಾಲಕ ಚಂದ್ರಶೇಖರ ಅರಬಾಂವಿ ಮಾತನಾಡಿ, 7ನೇ ವೇತನದಲ್ಲಾದ ವ್ಯತ್ಯಾಸದಿಂದ ಸರ್ಕಾರಿ ನಿವೃತ್ತ ನೌಕರರಿಗೆ ಬಹಳ ತೊಂದರೆಯಾಗಿದ್ದು, ಆರು ತಿಂಗಳಿಂದ ಸತತ ಹೋರಾಟದ ಮೂಲಕ ಬೇಡಿಕೆ ಇಡಲಾಗಿದೆ. ಸಿಎಂ ರಾಜ್ಯ ಘಟಕದ ಸಭೆ ಕರೆದು 2022ರ ಜುಲೈ 2022 ಜುಲೈ 1ರ 7ನೇ ವೇತನ ಪ್ರಕಾರ ನಿವೃತ್ತ ನೌಕರರ ಸಂಘದ ಮನವಿಯನ್ನು ಮರು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿದರು.
ಚಂದ್ರಶೇಖರ ಅರಭಾವಿ, ಎ.ಐ.ನದ್ಾ, ಪಿ.ಸಿ.ಪಾಯನ್ನವರ, ಐ.ಜಿ.ಹಳೊಳಿ, ಜೆ.ಆರ್.ದಿನಕರ, ಎ.ಟಿ.ಮುಲ್ಲಾ, ಎಚ್.ಬಿ.ತಾವದಾರೆ, ಎಸ್.ಎಸ್.ನಾಯಕವಾಡಿ, ಎಸ್.ಎಚ್.ಕಟ್ಟಿ, ಅ.ಭಾ.ಪಟೇಲ, ಆರ್.ಡಿ.ಪಟವರ್ಧನ ಇತರರಿದ್ದರು.