ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಕರು ಶ್ರಮಿಸಲಿ

FotoJet 23 27
Published on

ಶೈಕ್ಷಣಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿಕೆ

ಚಿಕ್ಕನಾಯಕನಹಳ್ಳಿ: ಶಿಕ್ಷಣ ಮತ್ತು ಬುದ್ಧಿವಂತಿಕೆ ಎರಡು ಮಕ್ಕಳಲ್ಲಿ ಇರಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗುತ್ತದೆ. ಶಿಕ್ಷಕರು ಒತ್ತಡವೆಂದು ಭಾವಿಸದೇ ಒಳ್ಳೆಯ ಮನಸ್ಸಿನಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶ್ರಮಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮತ್ತು ಮುಖ್ಯಶಿಕ್ಷಕ ಸಭೆಯಲ್ಲಿ ವಾತನಾಡಿ, ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಪಡೆದಿರುವ ನಮ್ಮ ತಾಲೂಕು ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬರುವ ಮೂಲಕ ಶೇ.90ಕ್ಕೂ ಹೆಚ್ಚು ಲಿತಾಂಶ ಬರುವಂತೆ ವಾಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

ತುಮಕೂರಿನ ಡಯಟ್‌ನ ಪ್ರಾಂಶುಪಾಲ ಮಂಜುನಾಥ್ ವಾತನಾಡಿ, ನಾವು ವಾಡುವಂತಹ ಕೆಲಸಗಳು ಸಕಾರಾತ್ಮಕವಾಗಿ, ಪರಿಣಾಮಕಾರಿಯಾಗಿರಬೇಕು ಆಗ ವಾತ್ರ ಅದರ ಲಿತಾಂಶ ಉತ್ತಮವಾಗಿರುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಮನವರಿಕೆಯಾಗುವಂತೆ, ಮಕ್ಕಳಲ್ಲಿ ಸ್ವ ಮೌಲ್ಯವಾಪನ ವಾಡಿಕೊಳ್ಳುವಂತೆ ಪ್ರಜ್ಷೆ ಬೆಳೆಸಬೇಕು. ಯಾವ ಪ್ರಶ್ನೆಗೆ ಎಷ್ಟು ಅಂಕಗಳು, ಯಾವ ರೀತಿ ಉತ್ತರಿಸಬೇಕು, ಎಂಬಂತಹ ಸ್ವಶಕ್ತಿ ಬೆಳೆಸಬೇಕು ಎಂದರು.

ಬಿಇಒ ಕಾಂತರಾಜು ವಾತನಾಡಿ, ತಾಲೂಕಿನಲ್ಲಿ ಒಟ್ಟು 58 ಪ್ರೌಢಶಾಲೆಗಳಿದ್ದು, ಈ ಬಾರಿ ಒಟ್ಟು 2,385 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಈ ಬಾರಿಯ ಮಧ್ಯಪರೀಕ್ಷೆಯಲ್ಲಿ ಒಟ್ಟು 1,754 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ಶೇ.66 ಲಿತಾಂಶ ಬಂದಿದೆ. ಇನ್ನು 811 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದು, ಇವರಿಗೆ ವಿಶೇಷ ತರಗತಿಗಳನ್ನು ವಾಡುವುದರೊಂದಿಗೆ ಕಲಿಕೆಗೆ ಅನುಕೂಲವಾಗುವಂತೆ ಪ್ರೇರಣಾ ಶಿಬಿರಗಳನ್ನು ವಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಕರಾದ ಗವಿರಂಗಯ್ಯ, ಗಂಗಾಧರ್, ಶಿವಣ್ಣ, ತಾಲೂಕಿನ ಎಲ್ಲ ಪ್ರೌಢಶಾಲೆಗಳು ಮುಖ್ಯಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net