ಪ್ರತಿಭೆ ಗುರುತಿಸಿ ಮಾರ್ಗದರ್ಶನ ನೀಡಲಿ

Sgn teacher
Published on

ಶಿಗ್ಗಾಂವಿ: ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಮಾರ್ಗದರ್ಶನ ನೀಡಿದರೆ ಸಮಾಜಕ್ಕೆ ಒಬ್ಬ ಅತ್ಯುತ್ತಮ ವ್ಯಕ್ತಿ ಸಿಗಲು ಸಾಧ್ಯ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.

ಪಟ್ಟಣದ ವಿರಕ್ತಮಠದ ಸಂಗನಬಸವ ಮಂಗಲ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಪಂ, ಕ್ಷೆತ್ರ ಶಿಕ್ಷಣಾಧಿಕಾರಿ ಕಾರ್ಯಲಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಶಾಂತ ಮೋಟಗಿ ಉಪನ್ಯಾಸ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮೇಗೇರಿ, ತಾಪಂ ಇಒ ಹಾಲಯ್ಯನಕೋಟೆ ವಿಶ್ವನಾಥ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಉದ್ಘಾಟಿಸಿದರು.

ಲೇಖಕಿ, ಶಿಕ್ಷಕಿ ಸುವರ್ಣ ಹಾದಿಮನಿ ಅವರು ಬರೆದ ಶಾಂತಮಣಿ ಪುಸ್ತಕ ಬಿಡುಗಡೆ ಮಾಡಲಾಯಿತು. ಶ್ರೀಮತಿ ಗಂಗಮ್ಮ ಬೊಮ್ಮಾಯಿ ಅವರ ಸಂಸ್ಥೆ ಮೂಲಕ ಕೊಡುವ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ತಾಲೂಕಿನ ಪ್ರೌಢಶಾಲೆಯ ಮತ್ತು ಪ್ರಾಥಮಿಕ ಶಾಲೆಯ ತಲಾ 10 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ಹೇಮಪ್ಪ ರೆಡ್ಡಿ, ಅಶೋಕ ಕುಂಬಾರ, ಅರುಣ ಹುಡೇದಗೌಡ್ರ, ಎಫ್.ಸಿ. ಕಾಡಪ್ಪಗೌಡ್ರ, ಎಸ್.ಎನ್. ಮುಗಳಿ, ಬಿ.ವೈ. ಉಪ್ಪಾರ, ಬಿ. ಶ್ರೀನಿವಾಸ, ರಾಜಶೇಖರ ಹೆಸರೂರ, ಎಸ್.ಕೆ. ಹೂಗಾರ, ಬಸವರಾಜ ಆಡಿನ, ಡಿ.ಸಿ. ಸೂರಗೊಂಡ, ಶುಭಾಸ ಶಿರಹಟ್ಟಿ, ಬಿ.ಕೆ. ಹೊಸಪೇಟೆ, ಪ್ರವೀಣ ಸಾಗರ, ಮಂಜುನಾಥ ಕಮ್ಮಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net