ಮಹಾರಾಷ್ಟ್ರದಂತೆ ಕಬ್ಬು ದರ ನಿಗದಿಪಡಿಸಲಿ

30BRG1
Published on

ಬೋರಗಾಂವ: ಸ್ವಾಭಿಮಾನಿ ಶೇತ್ಕರಿ ಸಂಘಟನೆಯಿಂದ ಜಯಸಿಂಗ್‌ಪುರದಲ್ಲಿ ಅಕ್ಟೋಬರ್ 16ರಂದು 24ನೇ ಕಬ್ಬು ಪರಿಷತ್ ಜರುಗಲಿದ್ದು, ಮಾಜಿ ಸಂಸದ ರಾಜು ಶೆಟ್ಟಿ ಪ್ರತಿಟನ್ ಕಬ್ಬಿಗೆ ದರ ನಿರ್ಧರಿಸುತ್ತಾರೆ. ಸಕ್ಕರೆ ಕಾರ್ಖಾನೆಗಳು ಅವರು ಘೋಷಿಸಿದ ದರ ನೀಡಿದ ನಂತರವೇ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಸ್ವಾಭಿಮಾನಿ ಶೇತ್ಕರಿ ಸಂಘಟನೆ ಹಾಗೂ ಕರ್ನಾಟಕ ರೈತ ಸಂಘಟನೆ ಮುಖಂಡ ತಾತ್ಯಾಸಾಹೇಬ ಬಸಣ್ಣವರ ಹೇಳಿದರು.

ಬೋರಗಾಂವ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ದರ ನಿರ್ಧರಿಸಬೇಕು. ಇಲ್ಲದಿದ್ದರೆ ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ರೈತ ಸಂಘದ ಉತ್ತರ ಕರ್ನಾಟಕ ರಾಜ್ಯ ಗೌರವಾಧ್ಯಕ್ಷ ದರಿಖಾನ್ ಅಜ್ಜ ಮಾತನಾಡಿ, ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 2024-25ನೇ ಸಾಲಿನ ಎರಡನೇ ಕಂತಿನ ಪ್ರತಿಟನ್‌ಗೆ 500 ರೂ.ಬಾಕಿ ಇರಿಸಿಕೊಂಡಿವೆ. ಬಿಲ್ ಇನ್ನೂ ರೈತರ ಖಾತೆಗಳಿಗೆ ಜಮೆ ಆಗಿಲ್ಲ ಎಂದು ಆರೋಪಿಸಿದರು.

ರೈತ ಮುಖಂಡ ರಮೇಶ ಪಾಟೀಲ, ಬಂಟಿ ಪಾಟೀಲ ಮಾತನಾಡಿದರು. ರಮೇಶ ಮಾಲಗಾವೆ, ಪಂಕಜ ತಿಪ್ಪನವರ, ಶೀತಲ ಬಾ, ತಾತ್ಯಾಸಾಹೇಬ ಕೇಸ್ತೆ, ರಾಜು ಖಿಚಡೆ, ಶಿವಗೌಡ ಪಾಟೀಲ, ಧನ್ಯಕುಮಾರ ಚೌಗುಲೆ, ಡಾ.ಬಾಪು ಹಂಪಣ್ಣವರ ,ಅಭಯ ಪಾಟೀಲ, ಪೋಪಟ್ ಶಮನೇವಾಡಿ, ರಾಜಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net