

ಮೂಡಲಗಿ: ಸಾಧನೆಗೆ ಯಾವುದೂ ಅಡ್ಡಿಯಾಗದು. ಪ್ರತಿಯೊಬ್ಬರು ದೃಢ ಮನಸ್ಸು, ಛಲ, ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಮುನ್ನುಗ್ಗಿದಲ್ಲಿ ಯಶಸ್ಸು ನಿಶ್ಚಿತ ಎಂದು ಎಂದು ದಿವಾಣಿ ಹಾಗೂ ಜೆಎಂಎ್ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ನಗರದ ಕೆ.ಎಚ್.ಸೋನವಾಲ್ಕರ್ ಸರ್ಕಾರಿ ಪ್ರೌಢಶಾಲೆಯಲ್ಲಿ ೇತ್ರ ಶಿಣಾಧಿಕಾರಿಗಳ ಕಾರ್ಯಾಲಯ, ೇತ್ರ ಸಂಪನ್ಮೂಲ ಕೇಂದ್ರ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಾಂಗ ವಿದ್ಯಾರ್ಥಿಗಳ ಅಡಗಿರುವ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಸಿಡಿಪಿಒ ಯಲ್ಲಪ್ಪ ಗದಾಡಿ ಮಾತನಾಡಿ, ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆ ರೂಪಿಸಿದ್ದು, ಅರ್ಹರಿಗೆ ತಲುಪಿಸಬೇಕಿದೆ ಎಂದರು.
ವಕೀಲ ಲಕ್ಷ$್ಮಣ ಅಡಿಹುಡಿ ಮಾತನಾಡಿದರು. ಕಲ್ಲಪ್ಪ ಮತ್ತು ನಿಂಗಮ್ಮ ದಂಪತಿ ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯೆ ಖುರ್ಷಾದ ನಧಾಪ್ ಉಪಾಧ್ಯೆ ಭೀಮವ್ವ ಪೂಜೇರಿ, ತಹಸೀಲ್ದಾರ್ ಶಿವಾನಂದ ಬಬಲಿ, ತಾಪಂ ಇಒ ಎ್.ಜಿ. ಚಿನ್ನನವರ, ವೈದ್ಯಾಧಿಕಾರಿ ಭಾರತಿ ಕೋಣಿ, ಪುರಸಭೆ ಮುಖ್ಯಧಿಕಾರಿ ತುಕಾರಾಮ ಮಾದರ, ಪಿಡಿಒ ಬಿ.ಎಚ್.ಕುಂಬಾರ, ಎಸ್ಡಿಎಂಸಿ ಅಧ್ಯ ಸಂತೋಷ ಸೋನವಾಲ್ಕರ, ಆರ್.ಆರ್. ಬಾಗೋಜಿ ಇತರರಿದ್ದರು. ಕೆ.ಬಸವರಾಜ ನಿರೂಪಿಸಿದರು. ಪ್ರಕಾಶ ಪಾಟೀಲ ವಂದಿಸಿದರು.