

ಹೊಳೆಆಲೂರ: ಸಂಚಾರಿ ನಿಯಮ ಪಾಲನೆ ಕುರಿತು ಯಚ್ಚರೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸೋಮವಾರ ಜನಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ರೋಣ ಪಿಎಸ್‌ಐ ಎಲ್.ಕೆ. ಜೋಲಕಟ್ಟಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಹಾಗೂ ಅಭಿವೃದ್ಧಿಗೆ ವಿದ್ಯಾವಂತರು ಕಾನೂನು ಹಾಗೂ ಹಿರಿಯರ ಆದರ್ಶಗಳನ್ನು ಪಾಲಿಸಬೇಕು. ಜತೆಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಬೇಕು. ಪರಿಸರ ಸ್ವಚ್ಛತೆ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಿರುವುದು, ಗುಟ್ಖಾದಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷ ಕೆ.ಸಿ. ಹಿರೇಮಠಪಾಟೀಲ, ಗೌರವ ಕಾರ್ಯದರ್ಶಿ ಪಾಂಡುರಂಗ ಪತ್ತಾರ, ಸಹ ಕಾರ್ಯದರ್ಶಿ ವೀರಯ್ಯ ವಸ್ತ್ರದ, ಹೊಳೆಆಲೂರ ಠಾಣೆ ಎಎಸ್‌ಐ ಮಹೇಶ ಹೆರಕಲ್ಲ, ಆಡಳತಾಧಿಕಾರಿ ಕೆ.ಎಸ್. ಬಾರಕೇರ, ಪ್ರಾಚಾರ್ಯ ವಿಶ್ವನಾಥ ಪಾಟೀಲ, ಮುಖ್ಯೋಪಾಧ್ಯಾಯಿನಿ ವಸಂತಲಕ್ಷ್ಮೀ ಗಂಗೂರ, ಮುಖ್ಯೋಪಾಧ್ಯಾಯ ಬಿ.ಎಫ್. ಬಾಲನಗೌಡ್ರ, ಎಸ್.ಕೆ. ಆಡಿನ, ಎಸ್.ಎನ್. ಎಲಿಗಾರ, ಎಂ.ಎಸ್. ನೈನಾಪೂರ ಇದ್ದರು.