ವಿದ್ಯಾರ್ಥಿಗಳು ಆರೋಗ್ಯದತ್ತ ಗಮನ ಹರಿಸಲಿ

2dvk 8
Published on

ಬೆಳಗಾವಿ: ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡಾಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತ ತಮ್ಮ ಆರೋಗ್ಯದ ಸದೃಢತೆ ಕಾಪಾಡಿಕೊಳ್ಳಬೇಕು ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿದರು.

ನಗರದ ಗೋಗಟೆ ಪಿಯು ಕಾಲೇಜ್​ನಲ್ಲಿ ನಡೆದ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಒಟ್ಟುಗೂಡಿ ಕಾಲೇಜಿನಲ್ಲಿನ ಸಾಂಸತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾನಸಿಕ ಹಾಗೂ ಶಾರೀರಿಕ ಸದೃಢತೆ ಹೊಂದಬಹುದು. ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ದೊರೆಯುತ್ತಿದ್ದು, ಮೊಬೈಲ್​ ಬಳಕೆ ಮತ್ತು ಸಾಮಾಜಿಕ ಜಾಲತಾಣ ಉಪಯೋಗಿಸುವಾಗ ಕಡಿಮೆ ಮಾಡಿ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯ ಚೇರ್ಮನ್​ ವಿ.ಎಂ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ 2025ರ ಸಾಧನಾ ಮ್ಯಾಗ್​ಜಿನ್​ ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಡಾ. ಅಂಜನಾ ಕೆರೂರ, ಡಾ. ಎ.ಎಸ್​. ಜಡೆ, ಭಾರತಿ ಹೆಗಡೆ, ಎಸ್​.ಪಿ. ಕುಲಕರ್ಣಿ, ಇಶಾನ್​ ಕರಗುಪ್ಪಿಕರ್​, ನಿಧಿ ಕುಲಕರ್ಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net