

ಬೆಳಗಾವಿ: ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿಗಳು ಪಾಠದಂತೆ ಆಟದಲ್ಲಿಯೂ ಭಾಗವಹಿಸಬೇಕು ಎಂದು ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಹನಮಂತ ಮೇಲಿನಮನಿ ಹೇಳಿದರು.
ನಗರದ ಲಿಂಗರಾಜ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸತತ ಅಭ್ಯಾಸದಿಂದ ಕ್ರೀಡೆಯಲ್ಲಿಯೂ ಯಶಸ್ಸನ್ನು ಪಡೆಯಬೇಕು ಎಂದರು.
ಉಡುಪಿಯಲ್ಲಿ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಆಯೋಜಿಸಿದ್ದ 23 ವರ್ಷದೊಳಗಿನ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿರುವ ಕಲ್ಲೋಳಪ್ಪ ಬಂಡಿವಡ್ಡರ(ಭರ್ಚಿ ಎಸೆತ), ಭೂಷಣ ಪಾಟೀಲ (400 ಮೀ ಹರ್ಡಲ್ಸ್), ಸಂಜಯ ಪಾಟೀಲ (110 ಮೀ ಹರ್ಡಲ್ಸ್), ನಾಥ್ ದಳವಿ (400 ಮೀ ಓಟ), ಸ್ಪುರಾ ನಾಯಿಕ್ (ಹ್ಯಾಮರ್ ಥ್ರೋ), ಭವ್ಯಾ ಚಿ.ಜೆ. (ಭರ್ಚಿ ಎಸೆತ), ಚಿನ್ನ ಮತ್ತು ಬೆಳ್ಳಿ ಪದಕ ಪಡೆದಿರುವ ಅಪೂರ್ವಾ ನಾಯಿಕ (400 ಮೀ ಮತ್ತು 100 ಮೀ ಹರ್ಡಲ್ಸ್) ವೈಭವಿ ಬಿ. (200 ಮೀ ಮತ್ತು 100 ಮೀ ಓಟ) ಹಾಗೂ ಟ್ರಿಪಲ್ ಜಂಪ್ನಲ್ಲಿ ಕಂಚಿನ ಪದಕ ಪಡೆದಿರುವ ಸ್ಮಿಥಾ ಕೆ. ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾಯೆರ್ ಗಿರಿಜಾ ಹಿರೇಮಠ, ದೈಹಿಕ ಶಿಣ ನಿರ್ದೇಶಕ ಡಾ. ಸಿ. ರಾಮಾರಾವ, ಸಿದ್ದನಗೌಡ ಪಾಟೀಲ, ಶಶಿಕಾಂತ ಕೊಣ್ಣೂರ ಇತರರಿದ್ದರು.