ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಮಾಡಿಕೊಳ್ಳಲಿ

17MUDALGI2
Published on

ಮೂಡಲಗಿ: ವಿದ್ಯಾರ್ಥಿಗಳು ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆ ಹೊಂದಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ವಸತಿ ನಿಲಯದ ಮೇಲ್ವಿಚಾರಕ ಎಸ್.ಎಸ್.ಸೋರಗಾಂವಿ ಹೇಳಿದರು.

ಪಟ್ಟಣದ ಆರ್‌ಡಿಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸಿ /ಎಸ್‌ಟಿ ವಿದ್ಯಾರ್ಥಿಗಳಿಗೆ ಸರ್ಕಾರದ ಶೈಕ್ಷಣಿಕ ಯೋಜನೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ವಸತಿನಿಲಯದ ಮೇಲ್ವಿಚಾರಕ ಯಲ್ಲಪ್ಪ ಭಜಂತ್ರಿ ಮಾತನಾಡಿ, ಎಸ್‌ಸ್ಸಿ /ಎಸ್‌ಟಿ ವಿದ್ಯಾರ್ಥಿಗಳಿಗೆ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ರೂಪಿಸಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಸ್.ಎಲ್.ವೆಂಕಟಾಪುರ, ಪ್ರಾಚಾರ್ಯ ಎಸ್.ಬಿ.ಗೋಟೂರೆ ಮಾತನಾಡಿದರು. ಪ್ರೊ.ಶಿವಾನಂದ ಸತ್ತಿಗೇರಿ, ರಾಜು ಪತ್ತಾರ, ಮಲ್ಲಪ್ಪ ಪಾಟೀಲ, ಸಂಜೀವ ಮಂಟೂರ, ಮುತ್ತಣ್ಣ ಒಡೆಯರ, ಸುನೀಲ ಸತ್ತಿ, ಅಶ್ವಿನಿ ಗುರುವ, ನಂದಾ ತಳವಾರ, ಅಕ್ಷತಾ ಹೊಸಮನಿ, ಕವಿತಾ ಮಳಲಿ ಇತರರಿದ್ದರು. ಲಕ್ಷ್ಮಿ ಗೊರಗುದ್ದಿ ನಿರೂಪಿಸಿದರು. ಸೌಭಾಗ್ಯಾ ಸಾಯನ್ನವರ ಸ್ವಾಗತಿಸಿದರು. ಪ್ರೀತಿ ಬಂಗೆನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net