ವಿದ್ಯಾರ್ಥಿಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ

geetha gayana..
geetha gayana..
Published on

ಶಿರ್ವ: ವಿದ್ಯಾರ್ಥಿಗಳು ಸ್ಕೌಟ್ಸ್ ಗೈಡ್ಸ್‌ಗೆ ಸೇರುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾಪು ಹಾಗೂ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಕಾಪು ವಲಯಮಟ್ಟದ ಗೀತ ಗಾಯನ ದೇಶಭಕ್ತಿ ಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾವರ್ಧಕ ಸಂಘ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಪು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಆಲ್ಬನ್ ರೊಡ್ರಿಗಸ್, ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಾಜೇಶ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮರಿಯ ಅನಿತಾ ಮೆಂಡೋನ್ಸ, ಪ್ರಾಂಶುಪಾಲೆ ನೀಶಾ ಶೆಟ್ಟಿ, ತೀರ್ಪುಗಾರರಾದ ಪ್ರದೀಪ್, ಸಚ್ಚಿತ್, ಅನುಷಾ ಗೌಡ, ಸಹನ ದೀಪ್ತಿ ಮತ್ತು ಸೇಜಲ್ ಕೋಟ್ಯಾನ್ ಉಪಸ್ಥಿತರಿದ್ದರು. ಸಂಸ್ಥೆ ಕೋಶಾಧಿಕಾರಿ ನಿಮಿತಾ ಶೆಟ್ಟಿ ಸ್ವಾಗತಿಸಿದರು. ಡಾ.ಗೀತಾ ಶಶಿಧರ್ ವಂದಿಸಿದರು. ಸ್ಕೌಟ್ಸ್ ಮಾಸ್ಟರ್ ಅಮಿತಾ ಶೆಟ್ಟಿ ಮತ್ತು ಗೈಡ್ಸ್ ಕ್ಯಾಪ್ಟನ್ ರೀಕಾ ಫರ್ನಾಂಡಿಸ್ ನಿರೂಪಿಸಿದರು.

 ವಿಜೇತ ಶಾಲೆಗಳು

ಬನ್ನೀಸ್ ವಿಭಾಗದಲ್ಲಿ ಕಾಪು ದಂಡ ತೀರ್ಥ ಆಂಗ್ಲ ಮಾಧ್ಯಮ ಶಾಲೆ (ಪ್ರ), ಪಾಜಕ ಆನಂದ ತೀರ್ಥ ವಿದ್ಯಾಲಯ(ದ್ವಿ) ಬಹುಮಾನ ಪಡೆಯಿತು. ಬುಲ್‌ಬುಲ್ ವಿಭಾಗದಲ್ಲಿ ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ(ಪ್ರ), ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ(ದ್ವಿ) ಹಾಗೂ ಕಾಪು ದಂಡ ತೀರ್ಥ ಆಂಗ್ಲ ಮಾಧ್ಯಮ(ತೃ). ಕಬ್ಸ್ ವಿಭಾಗದಲ್ಲಿ ಪಾಜಕ ಆನಂದ ತೀರ್ಥ ವಿದ್ಯಾಲಯ(ಪ್ರ), ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ (ದ್ವಿ), ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ(ತೃ) ಬಹುಮಾನ ಗಳಿಸಿತು. ಸ್ಕೌಟ್ಸ್ ವಿಭಾಗದಲ್ಲಿ ಪಾಜಕ ಆನಂದ ತೀರ್ಥ ವಿದ್ಯಾಲಯ(ಪ್ರ), ಶಂಕರಪುರ ಸೇಂಟ್ ಜೋನ್ಸ್ ಆಕಾಡೆಮಿ ಪ್ರಾಥಮಿಕ ಶಾಲೆ(ದ್ವಿ), ಇನ್ನಂಜೆ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ(ತೃ) ಹಾಗೂ ಗೈಡ್ಸ್ ವಿಭಾಗದಲ್ಲಿ ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ (ಪ್ರ), ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ(ದ್ವಿ), ಪಾಜಕ ಆನಂದತೀರ್ಥ ವಿದ್ಯಾಲಯ(ತೃ) ಹಾಗೂ ರೋವರ್ಸ್‌ ಮತ್ತು ರೇಂಜರ್ಸ್ ವಿಭಾಗದಲ್ಲಿ ಶಂಕರಪುರ ಸೇಂಟ್ ಜೋನ್ಸ್ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net