ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಲಿ

Recently, dignitaries launched Smart Education in Loknath High School.
Published on

ಕುಮಟಾ: ಗುರುವಿನ ಸ್ಥಾನಮಾನ, ಹಿರಿಮೆ ಎಲ್ಲಕ್ಕಿಂತ ದೊಡ್ಡದು. ಬಾಲ್ಯದಲ್ಲಿ ಗುರುವಿನಿಂದ ಪಡೆದ ಪ್ರೇರಣೆಯೇ ಸಾಧನೆಗೆ ಕಾರಣವಾಗುತ್ತದೆ ಎಂದು ವಾಣಿಜ್ಯ ತೆರಿಗೆ ನಿರೀಕ್ಷಕ ಪ್ರಸನ್ನನಾಥ ಹೇಳಿದರು.

ತಾಲೂಕಿನ ಗುಡ್ ಕಾಗಾಲ-ಅಘನಾಶಿನಿಯ ಲೋಕನಾಥ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ವತಿಯಿಂದ ದೇಣಿಗೆಯಾಗಿ ಅಳವಡಿಸಿದ ಸ್ಮಾರ್ಟ್ ಎಜುಕೇಶನ್ ಸಿಸ್ಟಮ್ ಉದ್ಘಾಟಿಸಿ ಮಾತನಾಡಿದರು.

ಕನ್ನಡವೇ ನಮ್ಮ ಉಸಿರು ಅದನ್ನ ಉಳಿಸಿ, ಬೆಳೆಸಬೇಕು. ಹಾಗೆಯೇ ರಾಷ್ಟ್ರಾಭಿಮಾನವನ್ನೂ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಲೋಕನಾಥ ಶಿಕ್ಷಣ ಸಂಸ್ಥೆ ವತಿಯಿಂದ ಸ್ಮಾರ್ಟ್ ಕ್ಲಾಸ್ ಸಿಸ್ಟಮ್ ದೇಣಿಗೆ ನೀಡಿದ ಯೂಥ್ ಹಾಸ್ಟೆಲ್ಸ್ ಅಸೋಸಿಯೇಶನ್ ಸಂಸ್ಥೆಯ ಪ್ರಸನ್ನನಾಥ, ಡಾ. ಅರವಿಂದ ಎ.ಎಸ್ ಹಾಗೂ ಸಿದ್ದರಾಮಣ್ಣ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಲೋಕಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ. ಪಟಗಾರ, ಮುಖ್ಯಶಿಕ್ಷಕ ಎಸ್.ಎಸ್. ನಾಯ್ಕ, ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯದ ಮೇಲ್ವಿಚಾರಕ ವಿ.ಆರ್. ಪಟಗಾರ, ಗಣೇಶ, ತೌಹೀದ್ ಪ್ರೌಢಶಾಲೆ ಮುಖ್ಯಶಿಕ್ಷಕ ಗಣಪತಿ ಅಂಬಿಗ, ಶಿಕ್ಷಕರಾದ ಶ್ರೀಕಾಂತ ಪಟಗಾರ, ಹನೀಫ್ ಉಪ್ಪಾರಕರ, ಜಗದೀಶ ನಾಯ್ಕ ಕಾಗಾಲ ಇತರರು ಇದ್ದರು.

ವಿದ್ಯಾರ್ಥಿಗಳು ವಿವಿಧ ಮನೋರಂಜನೆ ಕಾರ್ಯಕ್ರಮ ಹಾಗೂ ಯೋಗಾಸನಗಳನ್ನು ಪ್ರದರ್ಶಿಸಿದರು. ಮುಖ್ಯಶಿಕ್ಷಕ ಎಸ್.ಎಸ್. ನಾಯ್ಕ, ಕೆ.ಎನ್. ನಾರಾಯಣಸ್ವಾಮಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net