ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ಅಳವಂಡಿ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಂಸತ್ ರಚನಾ ಕಾರ್ಯಕ್ರಮವನ್ನು ಸಾಹಿತಿ ವೀಣಾ ಪಾಟೀಲ್ ಉದ್ಘಾಟಿಸಿದರು. ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ಬುಜಂಗಸ್ವಾಮಿ, ಚಂದ್ರಶೇಖರ, ಸಂಪಕ್ಕ, ವಾಸವಾಂಬೆ, ಎಸ್.ಎಸ್.ಅಂಗಡಿ, ಸೂರ್ಯಕಾಂತ ಇತರರಿದ್ದರು.

Published on

ಅಳವಂಡಿ: ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳುವ ಜತೆಗೆ ವಿದ್ಯಾರ್ಥಿ ದೆಸೆಯಲ್ಲೇ ಶಾಸಕಾಂಗ ಕುರಿತು ಅರಿವು ಹೊಂದುವುದು ಅವಶ್ಯ ಎಂದು ಸಾಹಿತಿ ವೀಣಾ ಪಾಟೀಲ್ ಹೇಳಿದರು.

ಗ್ರಾಮದ ಶ್ರೀ ಸಿದ್ಧೇಶ್ವರ ಸಂಯುಕ್ತ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ ವಿಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ರಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಬೆಳೆಯುವ ಹಂತದಲ್ಲೇ ಜೀವನಕ್ಕೆ ಅಡಿಪಾಯ ಹಾಕಿಕೊಳ್ಳಿ ಎಂದು ಸಲಹೆ ನೀಡಿದರು. ನಂತರ ಶಾಲಾ ಸಂಸತ್ ಸದಸ್ಯರಿಗೆ ಪ್ರತಿಜ್ಞಾನವಿಧಿ ಬೋಧಿಸಲಾಯಿತು.

ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ಬುಜಂಗಸ್ವಾಮಿ ಇನಾಮದಾರ, ಸೂರ್ಯಕಾಂತ ಪಾಟೀಲ್, ನವೀನ ಇನಾಮದಾರ, ಎಸ್.ಎಸ್.ಅಂಗಡಿ, ಸಂಪಕ್ಕ ಗೊಲ್ಲರ, ವಾಸವಾಂಬೆ ಸರ್ವಶೆಟ್ಟಿ, ಎಂ.ಎಸ್.ಕೊಪ್ಪಳ, ಗಾಯತ್ರಿ ಪಾಟೀಲ್, ಅಮರೇಶ ಬೋಚನಳ್ಳಿ, ನೀಲಪ್ಪ ಹಕ್ಕಂಡಿ, ಹನುಮಂತ ಲಮಾಣಿ, ಶಕುಂತಲಾ ಹಿರೇಮಠ, ದೇವಮ್ಮ ಕಲಾದಗಿ, ಮಹೇಶ ಮಾಳೆಕೊಪ್ಪ, ಚನ್ನಯ್ಯ ಹಿರೇಮಠ, ಆಯಿಷಾ, ಗಣೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net