ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ

ವಿರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಪಧಾಧಿಕಾರಿಗಳೊಂದಿಗೆ ಗಣ್ಯರು ಇದ್ದರು. ಕುಂಬೆರ ಮನು, ಅರಸು ಅಚ್ಚಮ್ಮ, ಮಾಳೇಟಿರ ಶ್ರೀನಿವಾಸ್, ಆಪಾಡಂಡ ಕಾರ್ಯಪ್ಪ, ಪುಟ್ಟಿಚಂಡ ನವೀನ್, ಧನು ಇದ್ದರು.
ವಿರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿ ಪಧಾಧಿಕಾರಿಗಳೊಂದಿಗೆ ಗಣ್ಯರು ಇದ್ದರು. ಕುಂಬೆರ ಮನು, ಅರಸು ಅಚ್ಚಮ್ಮ, ಮಾಳೇಟಿರ ಶ್ರೀನಿವಾಸ್, ಆಪಾಡಂಡ ಕಾರ್ಯಪ್ಪ, ಪುಟ್ಟಿಚಂಡ ನವೀನ್, ಧನು ಇದ್ದರು.
Published on

ವಿರಾಜಪೇಟೆ: ಪಟ್ಟಣದ ತ್ರಿವೇಣಿ ಶಾಲೆಯಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.

ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನು ಮಾತನಾಡಿ, ಮಕ್ಕಳಲ್ಲಿ ಪ್ರೀತಿ, ಅನುಕಂಪ, ಸಹನೆ ಹಾಗೂ ಉದಾತ್ತ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಬಾಳ್ವೆ ನಡೆಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ಮೇರಿಯಂಡ ಅರಸು ಅಚ್ಚಮ್ಮ ಮಾತನಾಡಿ, ಮಕ್ಕಳು ಹಿರಿಯರು ಹಾಗೂ ಗುರುಗಳಿಗೆ ಗೌರವ ಕೊಡಬೇಕು. ಜತೆಗೆ ಶಾಲೆಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಈ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಹಾಗಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿರುವ ಮೂಲಕ ಸಾಧನೆಯ ಮೆಟ್ಟಿಲುಗಳನ್ನು ಏರಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಆಪಾಡಂಡ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಸಮಯಪ್ರಜ್ಞೆ ಮುಖ್ಯವಾಗಿದ್ದು, ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ನೂತನ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಂಸ್ಥೆ ನಿರ್ದೇಶಕ ಪುಟ್ಟಿಚಂಡ ನವೀನ್, ಧನು ಇತರರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net