ಕ್ರೀಡೆ ಯುವಜನರ ಚೇತನವಾಗಲಿ

10 NRD-2
: ನರಗುಂದ ತಾಲೂಕಿನ ಬನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರೂಪ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಸೊಲಬಯ್ಯ ಸ್ವಾಮೀಜಿ ಬುಧವಾರ ಚಾಲನೆ ನೀಡಿ ಮಾತನಾಡಿದರು
Published on

ನರಗುಂದ: ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ನಿತ್ಯದ ಚಟುವಟಿಕೆಗಳು ಉಲ್ಲಾಸದಿಂದ ಕೂಡಿರುತ್ತವೆ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು ಬನಹಟ್ಟಿ ರುದ್ರಸ್ವಾಮಿ ಮಠದ ಸೊಲಬಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಬನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರೂಪ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಜನಾಂಗ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿಕೊಂಡು, ಅದರಿಂದಾಗುವ ದುಷ್ಪರಿಣಾಮಗಳಿಂದ ದೂರವಿರಬೇಕು ಎಂದು ತಿಳಿಸಿದರು. ಬನಹಟ್ಟಿ ಕೆಪಿಎಸ್ ಶಾಲೆ ಪ್ರಾಚಾರ್ಯ ಕೆ.ಡಿ. ಹುದ್ದಾರ, ಮುಖ್ಯೋಪಾಧ್ಯಾಯ ಎಸ್.ಬಿ. ಹರೆಣ್ಣನವರ, ಚಂದ್ರಪ್ಪ ಜಾಧವ, ಎನ್.ಆರ್. ನಿಡಗುಂದಿ, ಎಂ.ಆರ್. ಬೋಸ್ಲೆ, ಎ.ಎಸ್. ಚಿಕ್ಕರಡ್ಡಿ, ಬಿ.ಎಚ್. ಕಡ್ಲಿಕೊಪ್ಪ, ಎಸ್.ಎಂ. ಭೂಸರಡ್ಡಿ, ಶಿವರಾಜ ಕಲ್ಲಾಪೂರ, ಆರ್.ವಿ. ಹೊಂಬಳ, ಬಸವ್ವ ಮ್ಯಾಗೇರಿ, ಆರ್.ಎಸ್. ಅಂಗಡಿ, ವಿ.ಕೆ. ಚನ್ನಪ್ಪಗೌಡ್ರ, ಪೂಜಾರ, ಖಾನಪ್ಪಗೌಡ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net