ತಂತ್ರಜ್ಞಾನದ ಜತೆಗೆ ಅಧ್ಯಾತ್ಮ ಬೆರೆಯಲಿ

Let spirituality blend with technology.
ಮಹಾಲಿಂಗಪುರದ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.ಚಿಮ್ಮಡದ ಪ್ರಭು ಸ್ವಾಮಿಗಳು, ಎಸ್.ಐ.ಕುಂದಗೋಳ, ಡಾ.ಕೆ.ಎಂ. ಮತ್ತಿತರರಿದ್ದಾರೆ.
Published on

ಮಹಾಲಿಂಗಪುರ: ವೇಗವಾಗಿ ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು ಕಲಿಸುವ ಹಾಗೂ ವಿದ್ಯಾರ್ಥಿಗಳು ಕಲಿಯುವ ವಿಧಾನದಲ್ಲಿ ಕ್ರಾಂತಿಯುಂಟಾಗಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.

ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಸಂಕ್ರಮಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನದ ಜತೆ ಅಧ್ಯಾತ್ಮವೂ ಬೆರೆತರೆ ಪರಿಪೂರ್ಣ ಬದುಕು ಸಾಧ್ಯ. ಪಡೆದ ವಿದ್ಯೆ ಪಾವನವೆನಿಸಬೇಕಾದರೆ ವಿದ್ಯಾರ್ಥಿಗಳು ಉದ್ಯೋಗಿಯಾಗಿ, ಇಲ್ಲವೇ ಉದ್ಯಮಿಯಾಗಿ ತಮ್ಮ ಕುಟುಂಬಕ್ಕೆ ಮತ್ತು ದೇಶಕ್ಕೆ ಆಧಾರವಾಗಬೇಕು ಎಂದರು.

ಪ್ರಾಚಾರ್ಯ ಎಸ್.ಐ. ಕುಂದಗೋಳ ವರದಿ ವಾಚಿಸಿ, ಕಾಲೇಜಿನ 17 ವರ್ಷಗಳ ಸಮರ್ಥ ಸಾರಥ್ಯದಲ್ಲಿ ಉಪನ್ಯಾಸಕರ ಸಮರ್ಪಣಾ ಮನೋಭಾವ, ವಿದ್ಯಾರ್ಥಿಗಳ ಶ್ರದ್ಧೆಯನ್ನು ನೋಡಿದ್ದೇನೆ. ಪ್ರತಿ ವರ್ಷ ಬಹುರಾಷ್ಟ್ರೀಯ ಕಂಪನಿಗಳ ಕ್ಯಾಂಪಸ್ ಸಂದರ್ಶನದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೇ.100 ರಷ್ಟು ಉದ್ಯೋಗ ಪಡೆದಿದ್ದು ಸಾರ್ಥಕತೆ ಉಂಟು ಮಾಡಿದೆ ಎಂದರು.

ಎಸ್‌ಸಿಪಿ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್.ಅರಕೇರಿ, ಮಹೇಶ್ವರಿ ನಾಗರಾಳ ಮತ್ತು ಮಲ್ಲೇಶ ಪಾಟೀಲ ಮಾತನಾಡಿದರು.

ಗಣಿತ ವಿಷಯದಲ್ಲಿ ಶೇ.100 ಅಂಕಗಳಿಸಿದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತಿಮ ವರ್ಷದ 205 ವಿದ್ಯಾರ್ಥಿಗಳಿಗೆ ಎಕ್ಸಿಕ್ಯೂಟಿವ್ ಫೈಲ್ ಉಚಿತವಾಗಿ ನೀಡಲಾಯಿತು. ಪೂಜ್ಯರನ್ನು ಹಾಗೂ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ನಂದಿತಾ ಹಾದಿಮನಿ ಅವರಿಂದ ಭರತ ನಾಟ್ಯಜರುಗಿತು.

ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ, ಸಂತೋಷ ಹುದ್ದಾರ, ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ಸವಿತಾ ಬೀಳಗಿ, ಕ್ರೀಡಾ ವಿಭಾಗದ ಮುಖ್ಯಸ್ಥ ಸುಭಾಸ್ ಮೂಶಿ, ವಂದನಾ ಪಸಾರ, ಅನಿಕೇತ ತಾರದಾಳೆ, ಗುರುರಾಜ ಅಥಣಿ, ಮಿನಾಜ ಅತ್ತಾರ, ನಿರ್ಮಲಾ ಕೀರಪುರ, ಉಮೇಶ ಹಾದಿಮನಿ, ಅಮೀತ ಜಾಧವ, ಮಂಜುನಾಥ ಅರಕೇರಿ, ಮಹಾದೇವಿ ಅಂಬಿ, ಈಶ್ವರ ಹೂಲಿ, ವಿಶಾಲ ಮೆಟಗುಡ್ಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net