

ಲೋಕಾಪುರ: ರಾಜಕೀಯ ಸಮಾಜ ಸೇವೆಗೆ ದೊರೆತ ಅವಕಾಶವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಲೋಕಾಪುರ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಚುಳಕಿ ಹೇಳಿದರು.
ಪಟ್ಟಣದ ಲೋಕಾಪುರ ಬಸವೇಶ್ವರ ಬ್ಯಾಂಕ್ ಆವರಣದಲ್ಲಿ ನೂತನ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವೆಯ ಮೂಲಕ ಸಮಾಜಕ್ಕೆ ನಾವು ದೊಡ್ಡ ಕಾಣಿಕೆ ನೀಡಬಹುದು. ಸಮಾಜದಲ್ಲಿನ ದುರ್ಬಲರನ್ನು ಮೇಲೆತ್ತುವ ಕಾರ್ಯಗಳ ಮೂಲಕ ಗುರುತಿಸಿಕೊಳ್ಳಬೇಕು ಎಂದರು.
ಬಾಗಲಕೋಟೆ, ಬೆಳಗಾವಿ, ವಿಜಯಪುರ ಜಿಲ್ಲೆಗಳ ಟೆಲಿಕಾಂ ಸಲಹಾ ಸಮಿತಿ ನೂತನ ಸದಸ್ಯ ಸದಾಶಿವ ಹಗ್ಗದ, ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯ ಗೋವಿಂದ ಕೌಲಗಿ ಮಾತನಾಡಿದರು.
ಬ್ಯಾಂಕ್ ನಿರ್ದೇಶಕ ಅಲ್ಲಾಸಾಬ ಯಾದವಾಡ, ಮೌನೇಶ ಬಡಿಗೇರ, ಶಂಕರ ವಿಭೂತಿ, ಮಹೇಶ ಹುಗ್ಗಿ, ಕಾರ್ಯನಿರ್ವಾಹಕಿ ಜ್ಯೋತಿ ಜವಳೇಕರ ಹಾಗೂ ಸಿಬ್ಬಂದಿ ಇದ್ದರು.