ಸ್ವಸಹಾಯ ಸಂಘಗಳು ಸಮಾಜಕ್ಕೆ ಮಾದರಿಯಾಗಲಿ

13BTP01
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಒಕ್ಕೂಟದ ಸಭೆಯಲ್ಲಿ ಕೀರ್ತಿರಾಜ್ ಮಾತನಾಡಿದರು. ಕೀರ್ತಿ, ಜಯಲಕ್ಷ್ಮೀ, ದಿನೇಶ್, ಶಿವಮೂರ್ತಿ ಇದ್ದರು.
Published on

ಬೆಟ್ಟದಪುರ: ಸ್ವಸಹಾಯ ಸಂಘಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲೆಕ್ಕ ಪರಿಶೋಧಕ ಕೀರ್ತಿರಾಜ್ ತಿಳಿಸಿದರು.

ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಪಿರಿಯಾಪಟ್ಟಣ ತಾಲೂಕಿನಲ್ಲಿ 2292 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಮೂರು ತಿಂಗಳಿಗೊಮ್ಮೆ ಒಕ್ಕೂಟದ ಸಭೆ ನಡೆಸಲೇಬೇಕು. ವಾರದ ಸಭೆ ಕೂಡ 10 ರಿಂದ 20 ನಿಮಿಷ ನಡೆಯಬೇಕು. ಆಗ ಮಾತ್ರ ಸದಸ್ಯರಿಗೆ ಹೆಚ್ಚಿನ ಮಾಹಿತಿ ಮತ್ತು ಸವಲತ್ತುಗಳ ಬಗ್ಗೆ ತಿಳಿಯಬಹುದು. ಇದರಿಂದ ಆರ್ಥಿಕವಾಗಿ ಸದೃಢತೆ ಹೊಂದಲು ಸಾಧ್ಯ ಎಂದು ತಿಳಿಸಿದರು.

ಯೋಜನೆಯ ಮೇಲ್ವಿಚಾರಕಿ ಕೀರ್ತಿ ಮಾತನಾಡಿ, ಸಂಘದ ಸದಸ್ಯರು ರಾಷ್ಟ್ರೀಯ ಪಿಂಚಣಿ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಬಿ.ಎಸ್.ಜಯಲಕ್ಷ್ಮೀ, ಪದಾಧಿಕಾರಿಗಳಾದ ದಿನೇಶ್, ಶಿವಮೂರ್ತಚಾರಿ, ಸೇವಾ ಪ್ರತಿನಿಧಿಗಳಾದ ವೀಣಾ, ಕವಿತಾ ಸೇರಿದಂತೆ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net