ವಿಜ್ಞಾನ ಪದವೀಧರರು ನವೋದ್ಯಮಿಗಳಾಗಲಿ

16dvk 8
Published on

ಬೆಳಗಾವಿ: ವಿಜ್ಞಾನ ಪದವೀಧರರು, ಅದರಲ್ಲೂ ಜೈವಿಕ ತಂತ್ರಜ್ಞಾನ ಪರಿಣತರು ತಾವು ಕಲಿತಿದ್ದನ್ನು ಮುಂದಿಟ್ಟುಕೊಂಡು ನವೀನ ಆಲೋಚನೆ ಮಾಡಿದರೆ ಯಶಸ್ವಿ ನವೋದ್ಯಮಿಗಳಾಗಬಹುದು ಎಂದು ಬೆಂಗಳೂರಿನ ಡೆಕ್ಸಟ್ರೋಸ್​ ಟೆಕ್ನಾಲಾಜಿಸ್​ ವ್ಯವಸ್ಥಾಪಕ ನಿರ್ದೇಶಕ ಅರವಿಂದ್​ ಜಿ. ಹೇಳಿದರು.

ನಗರದ ಕೆಎಲ್​ಇ ಸೊಸೈಟಿಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಮತ್ತು ಇನ್​ಸ್ಟಿಟ್ಯೂಷನ್​ ಇನ್ನೋವೆಷನ್​ ಕೌನ್ಸಿಲ್​ (ಐಐಸಿ) ಸಹಯೋಗದಲ್ಲಿ ಕಾಲೇಜಿನ ಸರ್​ ಸಿ.ವಿ.ರಾಮನ್​ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ), ಎಂಎಸ್​ಎಂಇ, ನಿಧಿ&ಇಐಆರ್​ ಮತ್ತು ಪ್ರಯಾಸ್​, ಸ್ಟೆಪ್​ ಹಾಗೂ ಬಿಐಆರ್​ಎಸಿಯಂತಹ ಸರ್ಕಾರಿ ಯೋಜನೆಗಳ ಪ್ರಯೋಜನಗಳ ಕುರಿತು ವಿವರಿಸಿದರು. ಪ್ರಾಚಾರ್ಯ ಡಾ.ಜೆ.ಎಸ್​.ಕವಳೇಕರ್​, ಐಐಸಿ ಅಧ್ಯಕ್ಷ ಡಾ.ಸತೀಶ ಎಂ.ಪಿ, ಡಾ.ವಿನಯಕುಮಾರ ಎಂ. ಇತರರಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಿ.ಎಸ್​.ಶೆಟ್ಟರ್​ ಸ್ವಾಗತಿಸಿದರು. ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿನಿ ಪೂರ್ವಿಕಾ ಪರಿಚಯಿಸಿದರು. ರತಾ ಎಂ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net